ಯೆನಪೋಯ ನರ್ಸಿಂಗ್ ಕಾಲೇಜು ವತಿಯಿಂದ ವೆಬಿನಾರ್
ಕೊಣಾಜೆ: ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಸೂತಿ ಹಾಗು ಸ್ತ್ರೀರೋಗ ಶುಶ್ರೂಷಾ ವಿಭಾಗದ ವತಿಯಿಂದ ವ್ಯಕ್ತಿತ್ವ ವಿಕಸನದ ಬಗ್ಗೆ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಇಂಪ್ಯಾಕ್ಟ್ ಕಾನ್ಸೆಲ್ಲಿಂಗ್ ಸೆಂಟರ್ ನ ಡಾ. ಜಾಬ್ ಜಾನ್ ಇವರು ವ್ಯಕ್ತಿತ್ವ ವಿಕಸನದ ಮಹತ್ವದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಲೀನಾ ಕೆ.ಸಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿನಿತಾ ಡಿಸೋಜ ಸ್ವಾಗತಿಸಿದರು. ಡಾ. ಪದ್ಮಪ್ರಿಯಾ, ಪ್ರಸೂತಿ ಹಾಗೂ ಸ್ತ್ರೀರೋಗ ಶುಶ್ರೂಷಕ ವಿಭಾಗದ ಮುಖ್ಯಸ್ಥೆ ವಂದನಾರ್ಪಣೆಯನ್ನು ಮಾಡಿದರು.
ವಿನಯ ಕುಮಾರಿ ಮತ್ತು ಆಮಿಷ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ರಾಯಕ್ರಮದಲ್ಲಿ ಭಾಗವಹಿಸಿದರು.
Next Story





