ದ್ವಿತೀಯ ಪಿಯು: ಖತೀಜತ್ ಫಾಯಿಝಾಗೆ ಶೇ.92 ಫಲಿತಾಂಶ
ಮಂಗಳೂರು, ಜು.18: ನಗರದ ಮಹೇಶ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖತೀಜತ್ ಫಾಯಿಝಾ 554 (ಶೇ.92.33) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಖತೀಜತ್ ಅವರು ಪಿಸಿಎಂಬಿಯಲ್ಲಿ 376 ಅಂಕ ಪಡೆದಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ಸುರತ್ಕಲ್ ನಿವಾಸಿ ಕೆ.ಎಂ. ಉಮರ್ ಫಾರೂಕ್ ಹಾಗೂ ಝೀನತ್ ಎಂಬವರ ಪುತ್ರಿ.
Next Story