ರಾಜ್ಯದಲ್ಲಿ ಮತ್ತೆ 4,537 ಮಂದಿಗೆ ಕೋವಿಡ್ ದೃಢ: 93 ಮಂದಿ ಸೋಂಕಿಗೆ ಬಲಿ
ಕೊರೋನ ಸಾವಿನ ಸಂಖ್ಯೆ 1240ಕ್ಕೆ ಏರಿಕೆ

ಬೆಂಗಳೂರು, ಜು.18: ರಾಜ್ಯದಲ್ಲಿ ಕೊರೋನ ವೈರಸ್ ಮರಣ ಮೃದಂಗ ಮುಂದುವರಿದಿದ್ದು, ಶನಿವಾರ ಒಂದೇ ದಿನ 93 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ. ಎರಡನೇ ಬಾರಿಗೆ ರಾಜ್ಯದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಕೊರೋನ ಪ್ರಕರಣಗಳು ಪತ್ತೆಯಾಗಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 4,537 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 59,652ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 49 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 7, ಧಾರವಾಡ 6, ಕಲಬುರಗಿ 5, ಬೆಳಗಾವಿ 3, ಬಳ್ಳಾರಿ 3, ತುಮಕೂರು 3, ದಾವಣಗೆರೆ 3, ಬಾಗಲಕೋಟೆ 3, ಹಾವೇರಿ 2, ಮೈಸೂರು 2, ಉಡುಪಿ 2, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಬೀದರ್ ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,125, ದಕ್ಷಿಣ ಕನ್ನಡ 509, ಧಾರವಾಡ 186, ವಿಜಯಪುರ 176, ಬಳ್ಳಾರಿ 155, ಬೆಳಗಾವಿ 137, ಉತ್ತರ ಕನ್ನಡ 116, ಶಿವಮೊಗ್ಗ 114, ಉಡುಪಿ 109, ಚಿಕ್ಕಬಳ್ಳಾಪುರ 107, ಮೈಸೂರು 101, ಬೆಂಗಳೂರು ಗ್ರಾಮಾಂತರ 94, ಗದಗ 82, ಕಲಬುರಗಿ 82, ಬೀದರ್ 72, ದಾವಣಗೆರೆ 56, ಹಾಸನ 51, ಮಂಡ್ಯ 42, ಕೋಲಾರ 35, ಚಾಮರಾಜನಗರ 34, ಚಿಕ್ಕಮಗಳೂರು 24, ತುಮಕೂರು 24, ಚಿತ್ರದುರ್ಗ 22, ರಾಯಚೂರು 16, ಹಾವೇರಿ 15, ಬಾಗಲಕೋಟೆ 13, ಕೊಪ್ಪಳ 13, ರಾಮನಗರ 13, ಕೊಡಗು 10, ಯಾದಗಿರಿಯಲ್ಲಿ 4 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 59,652 ಕೊರೋನ ಸೋಂಕಿತರ ಪೈಕಿ 21,775 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,018 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1,240 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 36,631 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







