ಉಡುಪಿ: ಕೊರೋನ ಸೋಂಕಿಗೆ ಒಟ್ಟು 11 ಬಲಿ

ಉಡುಪಿ, ಜು.18: ಜಿಲ್ಲೆಯಲ್ಲಿ ಶನಿವಾರ ಕೋವಿಡ್‌ಗೆ ಒಟ್ಟು ಮೂವರು ಬಲಿಯಾಗುವ ಮೂಲಕ ಈವರೆಗೆ ಜಿಲ್ಲೆಯಲ್ಲಿ ಒಟ್ಟು 11 ಮಂದಿ ಮೃತಪಟ್ಟಂತಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು 88 ವರ್ಷ ಪ್ರಾಯದ ವೃದ್ಧ, 20 ವರ್ಷ ಪ್ರಾಯದ ಯುವತಿ ಹಾಗೂ 65 ವರ್ಷ ಪ್ರಾಯದ ರೋಗಿ ಸಾವನ್ನಪ್ಪಿದ್ದಾರೆ. 88 ವರ್ಷ ಪ್ರಾಯದವರು ಕಾಪುವಿನ ಉಳಿಯಾರು ಗ್ರಾಮದವರು. ಇಪ್ಪತ್ತು ವರ್ಷ ಪ್ರಾಯದ ಯುವತಿ ಕ್ಯಾನ್ಸರ್‌ನಿಂದ ಬಳಲುತಿದ್ದು ಈಕೆ ಕಾಪು ತಾಲೂಕು ಉದ್ಯಾವರದ ನಿವಾಸಿ ಎಂದು ತಿಳಿದುಬಂದಿದೆ. ಕಾರ್ಕಳ ತಾಲೂಕು ಸಾಣೂರಿನ ವೃದ್ಧರು 65 ವರ್ಷ ಪ್ರಾಯದವರು. ಅವರು ಉಸಿರಾಟದ ತೊಂದರೆ, ಶ್ವಾಸಕೋಶ ಹಾಗೂ ಹೃಯ ಸಮಸ್ಯೆಯಿಂದ ಬಳಲುತಿದ್ದರು.
ಮೊದಲ ಮೂರು ಸಾವು ಮುಂಬಯಿಯಿಂದ ಊರಿಗೆ ಮರಳಿ ಬಂದವರದ್ದಾಗಿದ್ದರೆ, ಉಳಿದ ಎಂಟು ಮಂದಿ, ಜಿಲ್ಲೆಯ ಹೊರಗಿನಿಂದ ಬಂದು ಇಲ್ಲಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತ ಸ್ಥಳೀಯರಾಗಿದ್ದಾರೆ.
Next Story





