ಯು. ಮುಹಮ್ಮದ್

ಮಂಗಳೂರು, ಜು.18: ಉಳ್ಳಾಲ ಪೇಟೆ ನಿವಾಸಿ ಯು. ಮುಹಮ್ಮದ್ (ಮಂಜಿರೊ ಮೋನಾಕ) ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. 80 ವರ್ಷ ಪ್ರಾಯದ ಮೃತರು ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಉಳ್ಳಾಲದ ಸಲ್ ಸಬೀಲ್ ಮಸೀದಿಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಉಳ್ಳಾಲದ ನಿಮ್ರಾ ಮಸೀದಿಯ ಸ್ಥಾಪಕರೂ ಆಗಿದ್ದರು. ಉಳ್ಳಾಲ ಮುಕ್ಕಚ್ಚೇರಿಯ ನಿಮ್ರಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಉಳ್ಳಾಲ ಪೇಟೆಯ ಮಸೀದಿಯಲ್ಲಿ ಶನಿವಾರ ಬೆಳಗ್ಗೆ ದಫನ ಕಾರ್ಯ ನಡೆಯಿತು.
Next Story





