ಭಟ್ಕಳ: 136 ಲೀಟರ್ ಅಕ್ರಮ ಮದ್ಯ ನಾಶ

ಭಟ್ಕಳ: ಅಬಕಾರಿ ಇಲಾಖೆಯವರು ಕೈಗೊಂಡ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಇಲ್ಲಿನ ಸಾಗರ ರಸ್ತೆಯ ಅರಣ್ಯ ಇಲಾಖೆಯ ಜಾಗದಲ್ಲಿ ನಾಶ ಮಾಡಲಾಯಿತು.
ಸುಮಾರು 136 ಲೀಟರ್, ಅಂದಾಜು 47,500 ರೂ. ಮೊತ್ತ ಮದ್ಯ ನಾಶ ಪಡಿಸಿಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಸೂಚನೆಯ ಮೇರೆಗೆ ಕೈಗೊಂಡಿದ್ದು ಅಬಕಾರಿ ಉಪ ಅಧೀಕ್ಷಕ (ಪ್ರಭಾರಿ) ಹೊನ್ನಾವರ ಉಪ ವಿಭಾಗದ ದಾಮೋದರ ನಾಯ್ಕ, ಅಬಕಾರಿ ನಿರೀಕ್ಷಕ(ಪ್ರಭಾರ) ಜಿ.ಎಲ್. ಬೋರಕರ್, ಭಟ್ಕಳ ವಲಯ ಅಬಕಾರಿ ಉಪ ನಿರೀಕ್ಷಕ ರವೀಂದ್ರನಾಥ ಎಸ್., ಸಿಬ್ಬಂದಿಗಳಾದ ಸೈಯದ್ ಹಮೀದ್, ಗಜಾನನ ನಾಯ್ಕ, ಶ್ರೀನಿವಾಸ ಗೌಡ ಮುಂತಾಧವರು ಭಾಗವಹಿಸಿದ್ದರು.
Next Story





