ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಶನಿವಾರ 10 ಮಂದಿಗೆ ಕೊರೋನ ಪಾಸಿಟಿವ್
ಉಳ್ಳಾಲ: ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಒಂದು ವರ್ಷದ ಮಗು, ಆರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಕೃಷ್ಣ ನಿಲಯ ತೊಕ್ಕೊಟ್ಟುವಿನಲ್ಲಿ 48 ವರ್ಷದ ಮಹಿಳೆ, ಕೃಷ್ಣ ನಗರದಲ್ಲಿ 52 ವರ್ಷದ ಮಹಿಳೆ, ಉಳ್ಳಾಲ ಮಹಿಳಾ ಕಾಲೇಜು ಬಳಿ 60 ವರ್ಷದ ಮಹಿಳೆ, ಬಸ್ತಿಪಡ್ಪುವಿನಲ್ಲಿ 56 ವರ್ಷದ ಮಹಿಳೆ, ಫೆರ್ಮನ್ನೂರುನಲ್ಲಿ 20 ವರ್ಷದ ಯುವಕ, ಬಸ್ತಿಪಡ್ಪುವಿನಲ್ಲಿ 56 ವರ್ಷದ ಮಹಿಳೆ, ಕೃಷ್ಣ ನಿವಾಸದಲ್ಲಿ 54 ವರ್ಷದ ಮಹಿಳೆ, ಮಾರ್ಗತಲೆಯಲ್ಲಿ 25 ವರ್ಷದ ಮಹಿಳೆ, ಕಲ್ಲಾಪು ಮಲ್ಲಿಗದ್ದೆಯಲ್ಲಿ ಒಂದು ವರ್ಷದ ಮಗು ಮತ್ತು ಉಳ್ಳಾಲದಲ್ಲಿ 46 ವರ್ಷದ ಪುರುಷ, ಅಕ್ಕರೆಕೆರೆಯಲ್ಲಿ 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮಹಿಳೆಯೊಬ್ಬರು ಸೇರಿದಂತೆ ಒಟ್ಟು ಮೂರು ಮಂದಿಗೆ ಸೋಂಕು ದೃಢಪಟ್ಟಿದೆ.
ಖಾಸಗಿ ಆಸ್ಪತ್ರೆಯಲ್ಲಿ 26 ವರ್ಷದ ಮಹಿಳೆ ಮತ್ತು 26 ವರ್ಷದ ಪುರುಷ, ಪಿಲಾರ್ ನಲ್ಲಿ 60 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.
ಬೆಳ್ಮ ಗ್ರಾಮದ ಕಾನಕೆರೆಯಲ್ಲಿ 30 ವರ್ಷದ ಪುರುಷ, ಕುತ್ತಾರ್ ನಲ್ಲಿ 30 ಮತ್ತು 51ವರ್ಷದ ಇಬ್ಬರು ಮಹಿಳೆಯರಿಗೆ ಕೊರೋನ ಸೋಂಕು ದೃಢಪಟ್ಟಿದೆ
ಕೊಣಾಜೆಯಲ್ಲಿ ಕೆಎಸ್ಆರ್ ಪಿ ಪೊಲೀಸರೊಬ್ಬರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಕೊರೋನ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 361 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.