ಐವರು ಬಿಬಿಎಂಪಿ ಮಾರ್ಷಲ್‍ಗಳಿಗೆ ಕೊರೋನ
ಬೆಂಗಳೂರು, ಜು.18: ಲಾಕ್‍ಡೌನ್ ಹಿನ್ನೆಲೆ ಮಾಸ್ಕ್ ಧರಿಸದವರಿಗೆ, ಅನಗತ್ಯ ಸಂಚಾರ ಮಾಡುತ್ತಿದ್ದವರನ್ನು ಹಿಡಿದು ದಂಡ ವಿಧಿಸುತ್ತಿದ್ದ, ಬಿಬಿಎಂಪಿಯ ಐವರು ಮಾರ್ಷಲ್‍ಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸದ್ಯ ಐವರು ಮಾರ್ಷಲ್‍ಗಳನ್ನು ಇಲ್ಲಿನ ಜಿಕೆವಿಕೆ ಬಳಿಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ .ಕೆ.ಆರ್.ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು, ಗಂಗೇನಹಳ್ಳಿ, ಕೊಡಿಗೆಹಳ್ಳಿ, ರಾಜಮಹಲ್ ಗುಟ್ಟಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೋನ ಸೋಂಕು ತಗುಲಿದೆ. ಇವರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
Next Story





