8 ಬೆಸ್ಕಾಂ ಸಿಬ್ಬಂದಿಗೆ ಕೊರೋನ ದೃಢ

ಬೆಂಗಳೂರು, ಜು.18: ನಗರದ ಬೆಸ್ಕಾಂ ಹೆಲ್ಪ್‍ಲೈನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಈ ಹಿಂದೆ ಓರ್ವ ಸಿಬ್ಬಂದಿಗೆ ಮಾತ್ರ ಸೋಂಕು ತಗುಲಿತ್ತು. ಆದಾದ ಬಳಿಕ, ಕಚೇರಿಯನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡುವಂತೆ ಸಿಬ್ಬಂದಿ ವರ್ಗ ಒತ್ತಾಯ ಮಾಡಿದ್ದರೂ, ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.
ಇದೀಗ ಶನಿವಾರ 8 ಮಂದಿ ಸಿಬ್ಬಂದಿಗೆ ಕೊರೋನ ಸೋಂಕಿರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
8 ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದರಿಂದ ಬೆಸ್ಕಾಂನ 24x7 ಸಹಾಯವಾಣಿಯನ್ನು 48 ಗಂಟೆಗಳ ಕಾಲ ಮಾಡಲಾಗಿರುತ್ತದೆ. ಗ್ರಾಹಕರು ವಿದ್ಯುತ್ ಸಂಬಂಧಿತ ಯಾವುದೇ ದೂರುಗಳಿಗಾಗಿ ಸಂಬಂಧಪಟ್ಟ ಬೆಸ್ಕಾಂ ಸಿಬ್ಬಂದಿಯನ್ನು 94808 12450 ಸಂಪರ್ಕಿಸಲು ಅಥವಾ ಜಾಲತಾಣ www.bescom.karnataka.gov.in ಕೋರಲಾಗಿದೆ.
Next Story





