ಕೊರೋನ ಕ್ಲಸ್ಟರ್ ಗಳಲ್ಲಿ ಸಮುದಾಯ ಪ್ರಸರಣ ಪ್ರಮಾಣ 50%ಕ್ಕೂ ಹೆಚ್ಚು: ಕೇರಳ ಸರಕಾರ

ತಿರುವನಂತಪುರ, ಜು.18: ಕೇರಳದಲ್ಲಿ ಗುರುತಿಸಲಾದ ಕೋವಿಡ್-19 ಕ್ಲಸ್ಟರ್ ಗಳಲ್ಲಿ ಕೊರೋನ ಸೋಂಕಿನ ಸಮುದಾಯ ಪ್ರಸರಣದ ಪ್ರಮಾಣ 50%ಕ್ಕಿಂತಲೂ ಅಧಿಕ ಎಂದು ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಶನಿವಾರ ಹೇಳಿದ್ದಾರೆ.
ಕೇರಳದಲ್ಲಿ 84 ಕ್ಲಸ್ಟರ್(ಸಮೂಹ)ಗಳನ್ನು ಗುರುತಿಸಲಾಗಿದೆ. ಈ ಸಮೂಹದೊಳಗೆ ಸೋಂಕಿನ ಪ್ರಮಾಣ 50%ಕ್ಕಿಂತಲೂ ಅಧಿಕವಾಗಿದೆ. ಆದರೆ ಹೊರಗೆ 10%ಕ್ಕಿಂತ ಕೆಳಗಿದೆ. ಸೋಂಕು ಸಮುದಾಯದಕ್ಕೆ ಹರಡುವುದನ್ನು ನಾವು ತಡೆಯಬೇಕಿದೆ . ಒಂದು ಸಮೂಹದಿಂದ ಇನ್ನೊಂದಕ್ಕೆ ಸೋಂಕು ಹರಡದಂತೆ ಪ್ರಯತ್ನಿಸುತ್ತಿದ್ದೇವೆ. ಸಮೂಹಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು ಸೋಂಕಿನ ಪ್ರಸಾರದ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಕರಾವಳಿ ಪ್ರದೇಶದ ಬಗ್ಗೆ ಸರಕಾರ ಗಮನ ನೀಡುತ್ತಿದೆ ಎಂದು ಸಚಿವೆ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಕೊರೋನ ಸೋಂಕು ಸಮುದಾಯ ಮಟ್ಟಕ್ಕೆ ಹರಡಿದೆ ಎಂದು ಶುಕ್ರವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಕೇರಳದಲ್ಲಿ ಕಳೆದ ಕೆಲವು ವಾರಗಳಿಂದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ.
Next Story





