ಪುತ್ತೂರು: ಖಾಸಗಿ ಆಸ್ಪತ್ರೆಯ ವೈದ್ಯೆ ಸಹಿತ ಮೂವರಿಗೆ ಕೊರೋನ ಪಾಸಿಟಿವ್

ಪುತ್ತೂರು, ಜು.19: ಪುತ್ತೂರಿನಲ್ಲಿ ಮತ್ತೊಬ್ಬರು ವೈದ್ಯರ ಸಹಿತ ಮತ್ತೆ ಮೂವರು ಕೊರೋನ ವೈರಸ್ ಸೋಂಕಿಗೆ ರವಿವಾರ ಪಾಸಿಟಿವ್ ಆಗಿದ್ದಾರೆ.
ನಗರದ ಹಾರಾಡಿ ನಿವಾಸಿ 55 ವರ್ಷದ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಅವರ ಪತಿಯೂ ವೈದ್ಯರಾಗಿದ್ದು, 65 ವರ್ಷದ ಅವರಿಗೆ ಶನಿವಾರ ಕೊರೋನ ದೃಢಪಟ್ಟಿತ್ತು. ವೈದ್ಯ ದಂಪತಿ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು ಪುರಸಭಾ ವ್ಯಾಪ್ತಿಯ ಕರ್ಮಲ ನಿವಾಸಿ 48 ವರ್ಷ ಪ್ರಾಯದ ಮಹಿಳೆ ಹಾಗೂ ನರಿಮೊಗರು ಗ್ರಾಮದ 45 ವರ್ಷ ವಯಸ್ಸಿನ ಮಹಿಳೆಯಲ್ಲಿ ರವಿವಾರ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇವರಿಬ್ಬರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಪತ್ತೆಯಾದ ಒಟ್ಟು ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 99ಕ್ಕೆ ಏರಿಕೆಯಾಗಿದೆ.
Next Story






