ಆಸ್ಟ್ರೇಲಿಯದ ಮಾಜಿ ನಾಯಕ ಜರ್ಮನ್ ನಿಧನ

ಮೆಲ್ಬೋರ್ನ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬ್ಯಾರ್ರಿ ಜರ್ಮನ್ (84) ಇತ್ತೀಚೆಗೆ ನಿಧನರಾದರು.
ಜರ್ಮನ್ ಅವರು ಪತ್ನಿ ಗೇನರ್ ಮತ್ತು ಮಕ್ಕಳಾದ ಕ್ರಿಸ್ಟನ್, ಗೇವಿನ್, ಜೇಸನ್, ಎರಿನ್‌ರನ್ನು ಅಗಲಿದ್ದಾರೆ.
1936 ರಲ್ಲಿ ಫೆಬ್ರವರಿ 17 ರಂದು ಜನಿಸಿದ ಜರ್ಮನ್ ಅವರು ಗಾಯಗೊಂಡ ವಾಲಿ ಗ್ರೌಟ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ಪರ 1959 ರಲ್ಲಿ ಗ್ರೀನ್ ಪಾರ್ಕ್‌ನಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
1966ರಲ್ಲಿ ಗ್ರೌಟ್ ನಿವೃತ್ತಿಯಾದ ನಂತರ ಆಸ್ಟ್ರೇಲಿಯದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆದರು. ಜರ್ಮನ್ 19 ಟೆಸ್ಟ್ ಆಡಿದರು. 400 ರನ್ ಗಳಿಸಿದರು. 50 ಕ್ಯಾಚ್ ಮತ್ತು ಸ್ಟಂಪಿಂಗ್ ದಾಖಲೆಯನ್ನು ಹೊಂದಿದ್ದಾರೆ.
1968ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಜರ್ಮನ್ ಅವರನ್ನು ಆಸ್ಟ್ರೇಲಿಯ ತಂಡದ ಉಪನಾಯ ಕನನ್ನಾಗಿ ನೇಮಿಸಲಾಯಿತು. ನಾಯಕ ಬಿಲ್ ಲಾರಿ ಬೆರಳಿಗೆ ಗಾಯವಾದ ಹಿನ್ನೆಲೆಯಲ್ಲಿ ಹೆಡಿಂಗ್ಲೆಟೆಸ್ಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದರು.
191 ಪ್ರಥಮ ದರ್ಜೆ ಪಂದ್ಯಗಳಲ್ಲಿ 431 ಕ್ಯಾಚ್ ಮತ್ತು 129 ಬಲಿ ಪಡೆದಿದ್ದಾರೆ. ವೃತ್ತಿ ಬದುಕಿನಿಂದ ನಿವೃತ್ತಿಯಾದ ನಂತರ 1995 ರಲ್ಲಿ ಅವರನ್ನು ಮೊದಲ ಐಸಿಸಿ ಪಂದ್ಯದ ಪ್ರಥಮ ರೆಫರಿಗಳಲ್ಲಿ ಒಬ್ಬರನ್ನಾಗಿ ನೇಮಿಸಲಾಯಿತು ಮತ್ತು ಅವರು 53 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿರೆಫರಿ ಆಗಿದ್ದರು.







