ಮೈಸೂರು ಮುಹಮ್ಮದ್ ಹಾಜಿ

ವಿಟ್ಲ, ಜು.19: ಮೂಲತ: ಬಂಟ್ವಾಳ ತಾಲೂಕು ನೇರಳಕಟ್ಟೆ ನಿವಾಸಿ, ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ, ಉದ್ಯಮಿ ಎನ್. ಮುಹಮ್ಮದ್ ಹಾಜಿ (63) ಹೃದಯಾಘಾತದಿಂದ ಶನಿವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೈಸೂರಿನ ತಿಲಕ್ ನಗರದಲ್ಲಿ ವಾಸವಾಗಿದ್ದ ಅವರು ಮೈಸೂರು ಜಿಲ್ಲೆಯಲ್ಲಿ ಅರಸನ್ ಸೋಪ್ ವಿತರಕ ಹಾಗೂ ಸುಲ್ತಾನ್ ಬೀಡಿ ಏಜೆಂಟರಾಗಿದ್ದರು. ಮೈಸೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story





