ವೈದ್ಯರು, ಸಿಬ್ಬಂದಿಗೆ ಡಿಸಿಯಿಂದ ನಿಂದನೆ ಆರೋಪ: ನ್ಯಾಯ ಕೋರಿ ಮನವಿ ಪತ್ರ ಸಲ್ಲಿಸಿದ ವೈದ್ಯಾಧಿಕಾರಿಗಳ ಸಂಘ
ಬೆಂಗಳೂರು, ಜು.19: ಕೊರೋನ ಭೀತಿ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಬೀದರ್ ಜಿಲ್ಲಾಧಿಕಾರಿಗಳು ಲಾಠಿ ಏಟಿನಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿರುವ ಬೀದರ್ ಜಿಲ್ಲಾ ವೈದ್ಯಾಧಿಕಾರಿಗಳ ಸಂಘವು ಈ ಕುರಿತು ನಮಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದೆ.
ಇಂತಹ ವರ್ತನೆ ನ್ಯಾಯ ಸಮ್ಮತವಲ್ಲ. ಬೀದರ್ ಜಿಲ್ಲಾಧಿಕಾರಿಗಳು ಡಿಎಚ್‍ಓ, ಡಿಎಸ್‍ಓ ಅವರ ಮೇಲೆ ಗರಂ ಆಗುವುದು. ಆರ್‍ಸಿಎಚ್ ಕಾರ್ಯಕ್ರಮ ಅಧಿಕಾರಿಗಳಿಗೆ ಸಭೆಯಿಂದ ಹೊರ ಹೋಗಿ ಎನ್ನುವುದು. ಕೆಲ ಅಧಿಕಾರಿಗಳಿಗೆ ಲಾಠಿ ಏಟಿನಿಂದ ಹೊಡೆಯುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಘಟನೆಯಿಂದ ನಮ್ಮೆಲ್ಲರ ಮಾನಸಿಕ ಸ್ಥೈರ್ಯ ಹಾಳಾಗಿಹೋಗಿದೆ. ಇಂತಹ ವಾತಾವರಣದಲ್ಲಿ ನಾವು ಹೇಗೆ ಕೆಲಸ ಮಾಡಬೇಕು? ಈ ಗಂಭೀರ ಸಮಸ್ಯೆ ಕುರಿತು ನಮಗೆ ನ್ಯಾಯ ಒದಗಿಸಬೇಕೆಂದು ಅಧ್ಯಕ್ಷರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
Next Story





