ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು, ಜು.19: ಕೋವಿಡ್-19 ಸಂಬಂಧ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಡ್ರೋನ್ ಪ್ರತಾಪ್ ವಿರುದ್ಧ ಇಲ್ಲಿನ ತಲ್ಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಜು.15ರಂದು ಹೈದರಾಬಾದ್‍ನಿಂದ ಹಿಂದಿರುಗಿದ್ದ ಪ್ರತಾಪ್ ಮರುದಿನವೇ ಹೋಂ ಕ್ವಾರಂಟೈನ್‍ನಲ್ಲಿರಬೇಕಿತ್ತು. ಆದರೆ, ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಲು ಪ್ರತಾಪ್ ಹೋಗಿರುವುದು ಮಾತ್ರವಲ್ಲದೇ ವಾಹಿನಿಯಲ್ಲಿಯೇ ತನ್ನ ಕೈಗೆ ಹಾಕಿರುವ ಸೀಲ್‍ಗಳನ್ನು ತೋರಿಸಿ ತಾನು ಹೋಂ ಕ್ವಾರಂಟೈನ್‍ನಲ್ಲಿ ಇದ್ದರೂ ಇಲ್ಲಿ ಬಂದಿರುವುದಾಗಿ ಹೇಳಿದ್ದರು ಎನ್ನಲಾಗಿದೆ.
ಹೋಂ ಕ್ವಾರಂಟೈನ್ ಮುದ್ರೆ ಸ್ಪಷ್ಟವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.
Next Story





