ಉಡುಪಿ ನಗರದ ಕೊರೋನ ವಾರಿಯರ್ ಗೆ ಸೋಂಕು

ಉಡುಪಿ, ಜು.19: ನಗರದ ಬಾಡಿಗೆಮನೆಯಲ್ಲಿ ವಾಸವಾಗಿರುವ ಕೊರೋನ ವಾರಿಯರ್ ಒಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅವರ ಮನೆಯ ಪರಿಸರವನ್ನು ಇಂದು ಸೀಲ್‌ಡೌನ್ ಮಾಡಲಾಗಿದೆ.
ಅದೇ ರೀತಿ ಬೊಮ್ಮಾರಬೆಟ್ಟುವಿನಲ್ಲಿ ಎರಡು, ಹೆರ್ಗ, ಉದ್ಯಾವರ, ಮಣಿಪುರ, ಅಂಜಾರುಗಳಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಎರಡು, ತ್ರಾಸಿಯಲ್ಲಿ ಎರಡು, ಬೆಳ್ಳಾಲ, ಬೇಳೂರು, ಗುಜ್ಜಾಡಿ, ಕಟ್‌ಬೆಳ್ತೂರು ತಲಾ ಒಂದು ಸೇರಿದಂತೆ ಒಟ್ಟು ಎಂಟು ಕೊರೋನ ಪಾಸಿಟಿವ್ ದೃಢಪಟ್ಟಿದೆ.
Next Story





