ಕೊರೋನ ಸೋಂಕಿತ ವ್ಯಕ್ತಿಯ ಕುಟುಂಬಕ್ಕೆ ನೀರು ಕೊಡದ ಗ್ರಾಮಸ್ಥರು: ಆರೋಪ
ನೀರು, ಆಹಾರದ ಕಿಟ್ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ ಎಸ್ಐ

ಸಾಂದರ್ಭಿಕ ಚಿತ್ರ
ಕಲಬುರಗಿ, ಜು.19: ದಿನಂಪ್ರತಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೊರೋನ ದೃಢಪಟ್ಟ ವ್ಯಕ್ತಿಯ ಕುಟುಂಬವೊಂದಕ್ಕೆ ನೆರೆಹೊರೆಯವರು ನೀರನ್ನೂ ಕೊಡದೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಫರಹತಾಬಾದ್ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಗ್ರಾಮದ ಕುಟುಂಬವೊಂದರ ಸದಸ್ಯನಾಗಿದ್ದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಗ್ರಾಮಸ್ಥರು ನೀರು ಕೊಡಲೂ ಹಿಂದೇಟು ಹಾಕುತ್ತಿದ್ದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಫರಹತಾಬಾದ್ ಠಾಣೆಯ ಎಸ್ಐ ಯಶೋಧಾ ಅವರು ಸೋಂಕಿತರ ಕುಟುಂಬಕ್ಕೆ ಧೈರ್ಯದ ಮಾತುಗಳನ್ನು ಆಡುವುದರ ಜೊತೆಗೆ ತಮ್ಮ ಠಾಣೆಯಿಂದಲೇ ಕುಡಿಯುವ ನೀರು ಹಾಗೂ ಆಹಾರದ ಕಿಟ್ ನೀಡಿ ನೆರವಿನ ಹಸ್ತ ಚಾಚಿದ್ದಾರೆ ಎಂದು ತಿಳಿದುಬಂದಿದೆ
Next Story





