ಐಸಿಸಿ ಟ್ವೆಂಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ ಸಾಧ್ಯತೆ

ಮುಂಬೈ: ಕಳೆದ ಎರಡು ತಿಂಗಳುಗಳಿಂದ ತಡೆಹಿಡಿಯಲ್ಪಟ್ಟ ಈ ವರ್ಷದ ಟ್ವೆಂಟಿ-20 ವಿಶ್ವಕಪ್‌ನಭವಿಷ್ಯವನ್ನು ಐಸಿಸಿ ಮಂಡಳಿ ಸೋಮವಾರ ನಿರ್ಧರಿಸಲಿದೆ.
ಟ್ವೆಂಟಿ-20 ವಿಶ್ವಕಪ್ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯದಲ್ಲಿ ನಡೆಯಬೇಕಿತ್ತು. ಆದರೆ ದೇಶದ ಕ್ರಿಕೆಟ್ ಮಂಡಳಿಯು ಮೇ ತಿಂಗಳಲ್ಲಿಯೇ ವಿಕ್ಟೋರಿಯಾ ರಾಜ್ಯದಲ್ಲಿ ಎರಡನೇ ಬಾರಿಗೆ ಕೋವಿಡ್-19 ಪ್ರಕರಣಗಳ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆತಿಥ್ಯ ವಹಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿತ್ತು.
ಭಾರತದಲ್ಲೂ ಕೋವಿಡ್-19 ಪ್ರಕರಣಗಳು 10 ಲಕ್ಷವನ್ನು ಮೀರಿದೆ ಇದರಲ್ಲಿ 26,000ಕ್ಕೂ ಹೆಚ್ಚು ಸಾವುಗಳು ಸೇರಿವೆ. ಭಾರತದಲ್ಲಿ ಐಪಿಎಲ್ ಮುಂದೂಡಲ್ಪಟ್ಟಿದ್ದು, ಒಂದು ವೇಳೆ ಟ್ವೆಂಟಿ-20 ವಿಶ್ವಕಪ್ ಮುಂದೂಡಲ್ಪಟ್ಟರೆ ಅದೇ ಸಮಯದಲ್ಲಿ ಯುಎಇ ಯಲ್ಲಿ ಐಪಿಎಲ್‌ನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಭಾರತದ ಕ್ರಿಕೆಟ್ ಮಂಡಳಿಯ ಮೊದಲ ಹೆಜ್ಜೆ ಏಶ್ಯ ಕಪ್‌ನ್ನು ಮುಂದೂಡುವುದಾಗಿತ್ತು. ಅದು ಆಗಿದೆ. ಟ್ವೆಂಟಿ-20 ವಿಶ್ವಕಪ್‌ನ್ನು ಐಸಿಸಿ ಮುಂದೂಡಿಕೆ ಘೋಷಿಸಿದ ನಂತರವೇ ನಾವು ನಮ್ಮ ಯೋಜನೆಗಳೊಂದಿಗೆ ಮುಂದುವರಿಯಲು ಪ್ರಾರಂಭಿಸಬಹುದು. ಕ್ರಿಕೆಟ್ ಆಸ್ಟ್ರೇಲಿಯ ವಿಶ್ವಕಪ್ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ಹೇಳಿದ ನಂತರವೂ ಐಸಿಸಿ ಅಧಿಕೃತ ಪ್ರಕಟನೆಯನ್ನು ಬಿಸಿಸಿಐ ಕಾಯುತ್ತಿದೆ ಎಂದು ಬಿಸಿಸಿಐ ಆಡಳಿತ ಸಮಿತಿಯ ಸದಸ್ಯರೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಈ ವರ್ಷದ ಟ್ವೆಂಟಿ-20 ವಿಶ್ವಕಪ್ 2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿದೆ. ಏಕೆಂದರೆ ಭಾರತವು ತನ್ನ 2021ರ ವಿಶ್ವಕಪ್ ಆತಿಥ್ಯ ಹಕ್ಕುಗಳನ್ನು ಕ್ರಿಕೆಟ್ ಆಸ್ಟ್ರೇಲಿಯದೊಂದಿಗೆ ವಿನಿಮಯ ಮಾಡಿಕೊಳ್ಳಲು ಬಯಸುವುದಿಲ್ಲ. ಸೆಪ್ಟಂಬರ್ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಗೆ ತಯಾರಿ ನಡೆಸುವಂತೆ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ತಿಳಿಸಿದ ನಂತರ ಆಸ್ಟ್ರೇಲಿಯ ಮೆಗಾ ಈವೆಂಟ್‌ನ್ನು ಆಯೋಜಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯ ಆ ಪ್ರವಾಸಕ್ಕಾಗಿ 26-ಪ್ರಬಲ ಪ್ರಾಥಮಿಕ ತಂಡವನ್ನು ಘೋಷಿಸಿದೆ. ಪಾಕಿಸ್ತಾನವು 2009ರಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಬೇಕಿತ್ತು. ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿಯ ನಂತರ, ಭವಿಷ್ಯದಲ್ಲಿ ಪಿಸಿಬಿ ಎಂದಿಗೂ ಪ್ರಮುಖ ಇವೆಂಟ್‌ಗಳನ್ನು ಆಯೋಜಿಸುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಐಸಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಿಸಿಬಿ ಆಯೋಜಿಸಬೇಕಿದ್ದ ಏಶ್ಯ ಕಪ್‌ನ್ನು 2021ಕ್ಕೆ ಮುಂದೂಡಿರುವುದು ಎಹ್ಸಾನ್ ಮಣಿ ಮತ್ತು ಅವರ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಸೋಮವಾರದ ಸಭೆಯಲ್ಲಿ ಚರ್ಚೆಗೆ ಬರಲಿರುವ ಇತರ ವಿಷಯವೆಂದರೆ ಈ ತಿಂಗಳ ಆರಂಭದಲ್ಲಿ ಶಶಾಂಕ್ ಮನೋಹರ್ ರಾಜೀನಾಮೆ ನೀಡಿದ ನಂತರ ಐಸಿಸಿಯ ಮುಂದಿನ ಸ್ವತಂತ್ರ ಮುಖ್ಯಸ್ಥರ ನಾಮನಿರ್ದೇಶನ ಪ್ರಕ್ರಿಯೆ.
ಅನೇಕ ಅಭ್ಯರ್ಥಿಗಳು ಕಣಕ್ಕೆ ಇಳಿದರೆ ಮಾನದಂಡ ಏನೆಂಬುದರ ಬಗ್ಗೆ ಒಮ್ಮತವಿಲ್ಲ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಕಾಲಿನ್ ಗ್ರೇವ್ಸ್‌ರನ್ನು ಕಣಕ್ಕಿಳಿಸಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅವರ ಹೆಸರು ಕೇಳಿ ಬರುತ್ತಿದೆ. ಗಂಗುಲಿ ಅವರ ಉಮೇದುವಾರಿಕೆಯು ಸುಪ್ರೀಂ ಕೋರ್ಟ್ ಕೂಲಿಂಗ್ ಆಫ್ ಅವಧಿಯನ್ನು ಕೈ ಬಿಡುತ್ತದೆಯೇ ಮತ್ತು ಜುಲೈ 27ರ ನಂತರ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡುತ್ತದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಗಂಗುಲಿ ರಾಜ್ಯ ಮತ್ತು ರಾಷ್ಟ್ರೀಯ ಘಟಕಗಳಲ್ಲಿ ಆರು ವರ್ಷಗಳನ್ನು ಪೂರೈಸುತ್ತಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಐಸಿಸಿ ಕೆಲಸವನ್ನು ತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಕೇಳಿದಾಗ, 48 ವರ್ಷದ ತಾನು ಚಿಕ್ಕವನು ಮತ್ತು ಈ ಹುದ್ದೆಗೆ ಯಾವುದೇ ಆತುರವಿಲ್ಲ ಎಂದು ಗಂಗುಲಿ ಹೇಳಿದ್ದರು. ನ್ಯೂಝಿಲ್ಯಾಂಡ್‌ನ ಗ್ರೆಗರ್ ಬಾರ್ಕ್ಲೇ, ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ಹಾಂಗ್ ಕಾಂಗ್‌ನ ಇಮ್ರಾನ್ ಖ್ವಾಜಾ ಕೂಡ ಸಂಭಾವ್ಯ ಅಭ್ಯರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ.







