ಚೆಂಡಿಗೆ ಜೊಲ್ಲುರಸ ಸವರಿದ ಇಂಗ್ಲೆಂಡ್‌ನ ಡೊಮಿನಿಕ್ ಸಿಬ್ಲಿ...!

ಮ್ಯಾಂಚೆಸ್ಟರ್: ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ವೆಸ್ಟ್ ಇಂಡೀಸ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಇಂಗ್ಲೆಂಡ್ ಓಪನರ್ ಡೊಮಿನಿಕ್ ಸಿಬ್ಲಿ ಚೆಂಡಿನ ಮೇಲೆ ಆಕಸ್ಮಿಕವಾಗಿ ಜೊಲ್ಲುರಸ ಸವರುವುದರ ಮೂಲಕ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಕೋವಿಡ್ -19 ಕಾರಣದಿಂದಾಗಿ ಹೊಸ ನಿಯಮಗಳನ್ನು ಐಸಿಸಿ ಘೋಷಿಸಿದ ನಂತರ ಆಟಗಾರನು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಜೊಲ್ಲುರಸ ಸವರುವುದನ್ನು ನಿಷೇಧಿಸಿತ್ತು.
ಆದಾಗ್ಯೂ, ಚೆಂಡನ್ನು ಹೊಳೆಯಲು ಅಜಾಗರೂಕತೆಯಿಂದ ಜೊಲ್ಲುರಸ ಸವರಿದ ಸಿಬ್ಲಿ ಬಳಿಕ ತನ್ನ ತಪ್ಪನ್ನು ಅಂಪೈರ್ ಗಮನಕ್ಕೆ ತಂದರು. ನಂತರ ಅಂಪೈರ್ ಮೈಕೆಲ್ ಗೌಫ್ ಸ್ಯಾನಿಟೈಸಡ್ ಟಿಶ್ಯೂ ಪೇಪರ್ ಬಳಸಿ ಚೆಂಡನ್ನು ಸ್ವಚ್ಛಗೊಳಿಸಿದರು. ವೆಸ್ಟ್ ಇಂಡೀಸ್ ಇನಿಂಗ್ಸ್‌ನ 41ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಹೊಸ ನಿಯಮಗಳ ಪ್ರಕಾರ, ಚೆಂಡಿಗೆ ಜೊಲ್ಲು ರಸವನ್ನು ಬಳಸಿದರೆ ಬೌಲಿಂಗ್ ತಂಡಕ್ಕೆ ಎಚ್ಚರಿಕೆ ನೀಡಲಾಗುತ್ತದೆ. ತಂಡವು ಎರಡಕ್ಕಿಂತ ಹೆಚ್ಚು ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ಐದು ರನ್‌ಗಳ ಪೆನಾಲ್ಟಿ ನೀಡಲಾಗುತ್ತದೆ.







