ಡ್ರೋನ್ ಪ್ರತಾಪ್ ಪತ್ತೆಗಾಗಿ ವಿಶೇಷ ಪೊಲೀಸರ ತಂಡ ರಚನೆ

ಬೆಂಗಳೂರು, ಜು.20: ಕೋವಿಡ್-19 ಸಂಬಂಧ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಡ್ರೋನ್ ಪ್ರತಾಪ್ ಪತ್ತೆಗಾಗಿ ವಿಶೇಷ ಪೊಲೀಸರ ತಂಡ ರಚನೆ ಮಾಡಲಾಗಿದೆ.
ಜು.15ರಂದು ಹೈದರಾಬಾದ್‍ನಿಂದ ಬೆಂಗಳೂರಿಗೆ ಆಗಮಿಸಿದ್ದ ಡ್ರೋನ್ ಪ್ರತಾಪ್ ನಗರದ ಅಪಾರ್ಟ್ ಮೆಂಟ್‍ವೊಂದರಲ್ಲಿ ವಾಸವಿದ್ದು, ಆತನನ್ನು ಬಿಬಿಎಂಪಿ 14 ದಿನ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿತ್ತು. ಆದರೆ, ಕ್ವಾರಂಟೈನ್ ಅವಧಿಯ ಮೂರನೇ ದಿನವೇ ನಿಯಮ ಉಲ್ಲಂಘನೆ ಮಾಡಿ ಹೊರಗಡೆ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರವಿವಾರದಿಂದ ಆತನ ಮೊಬೈಲ್ ಸಂಪರ್ಕ ಕಡಿತವಾಗಿದ್ದು, ಸದ್ಯ ತಲಘಟ್ಟಪುರ ಠಾಣಾ ಪೊಲೀಸರು, ಆತನ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.
Next Story





