ಕೋವಿಡ್ ಸೋಂಕಿತ ತಾಯಿಗೆ ವಿದಾಯ ಹೇಳಲು ಆಸ್ಪತ್ರೆ ಗೋಡೆ ಹತ್ತಿದ ಪುತ್ರ

Photo: Twitter
ಹೆಬ್ರಾನ್, ಜು. 20: ಕೋವಿಡ್ ಸೋಂಕಿನಿಂದ ತೀವ್ರ ಅಸ್ವಸ್ಥ ತನ್ನ ತಾಯಿಯನ್ನು ನೋಡಲು ಆಸ್ಪತ್ರೆಯ ಎತ್ತರದ ಗೋಡೆ ಹತ್ತಿ ತಾಯಿಯ ಮೃತದೇಹ ಇಟ್ಟ ಕೊಠಡಿಯ ಕಿಟಕಿ ತಲುಪಿದ ಪುತ್ರನ ಸಾಹಸವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಮನಸ್ಸು ಕಲಕಿದೆ.
ಜಿಹಾದ್ ಅಲ್ ಸುವೈತಿ ಎಂಬ ಫೆಲೆಸ್ತೀನಿ ಯುವಕನೇ ತನ್ನ ತಾಯಿಯನ್ನು ಕೊನೆಯ ಬಾರಿ ನೋಡಲು ಹೆಬ್ರಾನ್ ಸ್ಟೇಟ್ ಆಸ್ಪತ್ರೆಯ ತೀವ್ರ ನಿಗಾ ವಿಭಾಗದ ಗೋಡೆ ಏರಿದವನು. ಆತನ ತಾಯಿ ರಾಸ್ಮಿ ಸುವೈತಿ ಪುತ್ರ ಹೀಗೆ ಬಂದು ತನ್ನನ್ನು ನೋಡಿದ ಸ್ವಲ್ಪ ಹೊತ್ತಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅವರ 30 ವರ್ಷದ ಪುತ್ರ ಆಸ್ಪತ್ರೆಯ ಕೊಠಡಿಯ ಕಿಟಕಿ ಬಳಿ ಹತ್ತಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
"ನಾನು ತಾಯಿಯಿದ್ದ ತೀವ್ರ ನಿಗಾ ವಿಭಾಗದ ಕಿಟಕಿಯ ಹೊರಗೆ ಕೂತು ಅಸಹಾಯಕನಾಗಿ ಆಕೆಯ ಕೊನೆಯ ಕ್ಷಣಗಳನ್ನು ನೋಡಿದೆ " ಎಂದು ಜಿಹಾದ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
The son of a Palestinian woman who was infected with COVID-19 climbed up to her hospital room to sit and see his mother every night until she passed away. pic.twitter.com/31wCCNYPbs
— Mohamad Safa (@mhdksafa) July 18, 2020







