ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆ; ಒಟ್ಟು 1403 ಸಾವು
ಒಂದೇ ದಿನ 72 ಬಲಿ; 3,648 ಮಂದಿಗೆ ಪಾಸಿಟಿವ್

ಬೆಂಗಳೂರು, ಜು.20: ರಾಜ್ಯದಲ್ಲಿ ಸೋಮವಾರ 3,648 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 72 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,403ಕ್ಕೆ ಏರಿಕೆಯಾಗಿದೆ. 580 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಸೋಂಕಿನ ಸಾವಿನ ಪಟ್ಟಿಯಲ್ಲಿ ಬೆಂಗಳೂರು(31) ನಂತರ ಹೆಚ್ಚು ಸಾವಿನೊಂದಿಗೆ ದಕ್ಷಿಣ ಕನ್ನಡ 7, ಧಾರವಾಡ 6, ಮೈಸೂರು 5, ಬೀದರ್ 4 ಜನರು ಕೊರೋನದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 163, ಯಾದಗಿರಿ 73, ವಿಜಯಪುರ 58, ಕಲಬುರ್ಗಿ 55, ಕೋಲಾರ 52 ಮಂದಿ ಸೇರಿ ಒಟ್ಟು 730 ಮಂದಿ ಇಂದು ಗುಣಮುಖರಾಗಿದ್ದಾರೆ.
ಹೊಸ ಪ್ರಕರಣಗಳು ಎಲ್ಲೆಲ್ಲಿ?: 3,648 ಮಂದಿ ಸೋಂಕಿತರಲ್ಲಿ ದಿನದ ಅತಿ ಹೆಚ್ಚು ಸೋಂಕಿತರು ಬೆಂಗಳೂರು ನಗರ 1452, ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರ್ಗಿ 124, ಉಡುಪಿ 98, ದಕ್ಷಿಣ ಕನ್ನಡ 89, ಉತ್ತರ ಕನ್ನಡ 78, ದಾವಣಗೆರೆ 73, ಹಾಸನ 67, ಕೊಪ್ಪಳ 62, ಬೆಳಗಾವಿ 60, ಚಿಕ್ಕಬಳ್ಳಾಪುರ 60, ರಾಮನಗರ 56, ತುಮಕೂರು 55, ಬಾಗಲಕೋಟೆ 54, ಚಾಮರಾಜನಗರ 49, ಯಾದಗಿರಿ 43, ಚಿಕ್ಕಮಗಳೂರು 43, ಮಂಡ್ಯ 41, ಕೋಲಾರ 41, ಹಾವೇರಿ 36, ಗದಗ 31, ಚಿತ್ರದುರ್ಗ 29, ಬೀದರ್ 26, ಶಿವಮೊಗ್ಗ 19, ಕೊಡಗು 8, ರಾಯಚೂರು ಜಿಲ್ಲೆಯಲ್ಲಿ 3 ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿವೆ.







