ಅಣ್ಣು ಭಟ್

ಮಂಗಳೂರು, ಜು.20: ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿರುವ ಜಿ.ಟಿ. ಅಣ್ಣು ಭಟ್ ಯಾನೆ ಅಪ್ಪಯ್ಯ ಮಾಸ್ತರ್(94) ನೂಯಿ ಇಟ್ಟಬಾಗಲಿನ ಸ್ವಗೃಹದಲ್ಲಿ ರವಿವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಚೆಂಡೆ ವಾದಕರಾಗಿದ್ದ ಇವರು, ಹಲವು ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಪ್ರಿಯರಿಗೆ ಹಿಮ್ಮೇಳ ತರಬೇತಿ ನೀಡಿದ್ದರು. ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಆನುವಂಶಿಕ ತಂತ್ರಿಯಾಗಿದ್ದ ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವರ್ಗ ಅಗಲಿದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಿತು.
Next Story





