ಉಡುಪಿಯ ಹೋಟೆಲಿನ 18 ನೌಕರರಿಗೆ ಕೋರೋನ ಪಾಸಿಟಿವ್
ಸ ಸಾಂದರ್ಭಿಕ ಚಿತ್ರ
ಉಡುಪಿ,ಜು.20: ಉಡುಪಿಯ ಕರಾವಳಿ ಬೈಪಾಸ್ ನಲ್ಲಿರುವ ಹೋಟೆಲೊಂದರ 18 ಮಂದಿ ನೌಕರರಿಗೆ ಕೋರೋನ ಸೋಂಕು ದೃಢಪಟ್ಟಿದೆ.
ಈ ಹೋಟೆಲಿನ ಮಾಲಕರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಲ್ಲಿನ 20 ಮಂದಿ ನೌಕರರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೆ ಇವರಲ್ಲಿ ಇಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಭಟ್ಕಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಉಳಿದ 18 ಮಂದಿಯನ್ನು ಕೋರೋನ ಪರೀಕ್ಷೆ ನಡೆಸಲಾಗಿತ್ತು. ಇದೀಗ ಇವರೆಲ್ಲರ ವರದಿ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಈ ಹೋಟೆಲನ್ನು ಸೀಲ್ ಡೌನ್ ಮಾಡಲಾಗಿದೆ
Next Story