ಮಣಿಪಾಲ: ಕೇರಳದ ಯುವಕ ಕೊರೋನ ಸೋಂಕಿಗೆ ಬಲಿ

ಉಡುಪಿ, ಜು.21: ಕಿಡ್ನಿ ತೊಂದರೆಗಾಗಿ ಕಳೆದ 15 ದಿನಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೇರಳದ ಕಣ್ಣೂರು ಜಿಲ್ಲೆಯ 35ರ ಹರೆಯದ ಸಮೀರ್ ಎಂಬ ಯುವಕ ನಿನ್ನೆ ರಾತ್ರಿ ಮೃತಪಟ್ಟಿದ್ದು, ಆತನಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಮಣಿಪಾಲದ ಕೆಎಂಸಿಯಲ್ಲಿ ನಿನ್ನೆ ರಾತ್ರಿ ಮೃತಪಟ್ಟ ಕೇರಳದ ಯುವಕ ಕಿಡ್ನಿ ಸಮಸ್ಯೆಗಾಗಿ ಚಿಕಿತ್ಸೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸೋಮವಾರ ರಾತ್ರಿ ಮೃತಪಟ್ಟಿದ್ದು, ಆ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಆತ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇದೀಗ ಮಂಗಳೂರಿನಲ್ಲಿ ಲಾಕ್‌ಡೌನ್ ಹಾಗೂ ಉಡುಪಿಯಲ್ಲಿ ಗಡಿ ಸೀಲ್‌ಡೌನ್ ಇರುವುದರಿಂದ ಯುವಕನ ಕುಟುಂಬಿಕರಿಗೆ ಇಲ್ಲಿಗೆ ಬರಲು ತೊಂದರೆಯಾಗಿದ್ದು, ಆತನ ಅಂತ್ಯಸಂಸ್ಕಾರವನ್ನು ಉಡುಪಿಯ ದಫನ ಭೂಮಿಯಲ್ಲಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.
Next Story





