ಮೂರು ಪ್ರತ್ಯೇಕ ಪ್ರಕರಣ: ಜೂಜು ಅಡ್ಡೆ ಮೇಲೆ ದಾಳಿ; ನಾಲ್ವರ ಬಂಧನ

ಶಿವಮೊಗ್ಗ, ಜು.21: ಶಿವಮೊಗ್ಗದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆದ ಬೆನ್ನಲೇ ಭದ್ರಾವತಿ ನಗರದ ಕೆಲ ಜೂಜು ಮತ್ತು ಓಸಿ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಜು.20ರಂದು ಮೂರು ಪ್ರತ್ಯೇಕ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ವಿಜಯನಗರ ರಸ್ತೆ ಬಳಿಯಲ್ಲಿ ಓಸಿ ಅಡ್ದೆ ಮೇಲೆ ಹೊಸಮನೆ ಪೊಲೀಸರು ದಾಳಿ ನಡೆಸಿ ಪ್ರವೀಣ್‌ಕೊಂಡಿ(37) ಎಂಬಾತನನ್ನು ಬಂಧಿಸಿ, ರೂ.4,050 ವಶಪಡಿಸಿಕೊಂಡಿದ್ದಾರೆ.
ಇನ್ನು ಮಾರ್ಕೆಟ್ ಬಳಿಯಿರುವ ಆಟೋ ನಿಲ್ದಾಣದ ಹತ್ತಿರ ಓಲ್ಡ್‌ಟೌನ್ ಪೊಲೀಸರು ದಾಳಿ ನಡೆಸಿದ್ದು, ಜಗದೀಶ್ ದೊಡ್ಡ(40) ಎಂಬ ಆರೋಪಿಯನ್ನು ಬಂಧಿಸಿ 4,320 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕೂಲಿ ಬ್ಲಾಕ್‌ಶೆಡ್‌ನಲ್ಲಿ ನ್ಯೂಟೌನ್ ಪೊಲೀಸರು ದಾಳಿ ನಡೆಸಿದ್ದು, ಬಾಬು ಬಾಂಡ್ಲಿ(55) ಹಾಗೂ ವೆಂಕಟೇಶ್(38) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ 12,150 ರೂ. ನಗದು ವಶಕ್ಕೆ ಪಡೆದಿದ್ದಾರೆ.
Next Story





