ಕೋವಿಡ್ ಸೋಂಕಿತ ವ್ಯಕ್ತಿ ಮೃತ್ಯು: ಎಸ್ಸೆಸ್ಸೆಫ್ ಜಿಲ್ಲಾ ತುರ್ತು ಸೇವಾ ತಂಡದಿಂದ ಕಾಜೂರಿನಲ್ಲಿ ಅಂತ್ಯಕ್ರಿಯೆ

ಬೆಳ್ತಂಗಡಿ, ಜು.21: ಕೋವಿಡ್ ಸೋಂಕಿನಿಂದ ಮೃತಪಟ್ಟ ಕಾಜೂರು ನಿವಾಸಿಯ ಅಂತ್ಯಸಂಸ್ಕಾರವನ್ನು ಎಸ್ಸೆಸ್ಸೆಫ್ ದ.ಕ.ಜಿಲ್ಲಾ ತುರ್ತು ಸೇವಾ ತಂಡವು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ನಡೆಸಿತು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಕಳೆದ ಒಂದು ತಿಂಗಳ ಹಿಂದೆ ದಾಖಲಾಗಿದ್ದ ಕಾಜೂರು ನಿವಾಸಿಯೊಬ್ಬರು ನಿನ್ನೆ ಮರಣ ಹೊಂದಿದ್ದರು. ಮೃತಪಟ್ಟ ವ್ಯಕ್ತಿಯ ಕೊರೋನ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ತುರ್ತು ಸೇವಾ ತಂಡವು ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ, ತಾಲೂಕಿನ ದಂಡಾಧಿಕಾರಿ ಮತ್ತು ವೈದ್ಯಾಧಿಕಾರಿಯ ನಿರ್ದೆಶನದಂತೆ, ಜಿಲ್ಲಾ ನಾಯಕ ನವಾಝ್ ಸಖಾಫಿ ಅಡ್ಯಾರ್ ರವರ ನೇತೃತ್ವದಲ್ಲಿ ಕರೀಂ ಕೆದ್ಕಾರ್, ಮುಸ್ತಫಾ ಉರುವಾಲುಪದವು, ಸಿದ್ದೀಕ್ ಪರಪ್ಪು, ಎಂ.ಶರೀಫ್ ಸಖಾಫಿ ಉಜಿರೆಬೆಟ್ಟು, ಅಲ್ತಾಫ್ ಶಾಂತಿಬಾಗ್, ಶಿಹಾಬ್ ಕಕ್ಕೆಪದವು, ನೌಫಲ್ ಕಳಂಜಿಬೈಲು ಅವರನ್ನೊಳಗೊಂಡ ತಂಡ ಧಪನ ಕಾರ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಿತು.
ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ದುಆ ನೆರವೇರಿಸಿದರು. ರಾಜ್ಯ ಉಪಾಧ್ಯಕ್ಷ ಸುಫ್ಯಾನ್ ಸಖಾಫಿ, ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ನಾಯಕರಾದ ಇಕ್ಬಾಲ್ ಮಾಚಾರು, ಹಕೀಂ ಕಳಂಜಿಬೈಲು, ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಶರೀಫ್ ನಾವೂರು, ಡಿವಿಷನ್ ಸದಸ್ಯ ಮುಬೀನ್ ಉಜಿರೆ, ರಹ್ಮಾನಿಯ್ಯ ಜುಮ್ಮಾ ಮಸೀದಿ ಕಾಜೂರು ಅಧ್ಯಕ್ಷ ಇಬ್ರಾಹಿಂ ಕೆ.ಯು, ಪ್ರ.ಕಾರ್ಯದರ್ಶಿ ಸಿದ್ದೀಕ್ ಜೆ.ಹೆಚ್, ಕೋಶಾಧಿಕಾರಿ ಕಮಾಲ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಕೆ.ವಿ ಮುಂತಾದವರು ಉಪಸ್ಥಿತರಿದ್ದರು.
ಮಸೀದಿಯ ಆಡಳಿತ ಸಮಿತಿ, ಆರೋಗ್ಯ ಇಲಾಖೆಯ ಅಧಿಕಾರಿಗಳ, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರ ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಅಂತ್ಯಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.








