ಸಿಬಂದಿಗೆ ಕೊರೋನ ಪಾಸಿಟಿವ್: ಕಟಪಾಡಿ ಗ್ರಾಪಂ ಕಚೇರಿ ಸೀಲ್ಡೌನ್
ಉಡುಪಿ, ಜು.21: ಸ್ವಚ್ಚತಾ ಸಿಬಂದಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಇಂದು ಕಟಪಾಡಿ ಗ್ರಾಪಂ ಕೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಬಂದಿಗೆ ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಕಾರಣ ಅವರನ್ನು ಮನೆಯಲ್ಲಿಯೇ ಇರಿಸಲಾಗಿತ್ತು. ಈ ಮಧ್ಯೆ ಕೊರೋನ ಪರೀಕ್ಷೆಗೆ ಒಳಪಟ್ಟ ಇವರ ವರದಿ ಇದೀಗ ಪಾಸಿಟಿವ್ ಎಂಬುದಾಗಿ ಬಂದಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಗ್ರಾಪಂ ಕಛೇರಿಯನ್ನು ಸಂಪೂರ್ಣ ಸ್ಯಾನಟೈಸ್ ಮಾಡಲಾಗಿದ್ದು 2 ದಿನಗಳ ಕಾಲ ಕಛೇರಿಯನ್ನು ಮುಚ್ಚಲಾಗಿದೆ. ಬುಧವಾರದಿಂದ ಕಚೇರಿ ಕಾರ್ಯಾಚರಿಸಲಿದೆ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗ್ ತಿಳಿಸಿದ್ದಾರೆ.
Next Story