ಮೃತಪಟ್ಟ ಸಫಾಯಿ ಕರ್ಮಚಾರಿಯ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಧರಣಿ
ಬೆಳಗಾವಿ, ಜು.21: ಕರ್ತವ್ಯದಲ್ಲಿ ಇದ್ದಾಗಲೇ ಅಪಘಾತ ಸಂಭವಿಸಿ ಮೃತಪಟ್ಟ ಕರ್ಮಚಾರಿ ಜಿತೇಂದ್ರ ಬಾಪು ಡಾವಾಳೆ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಫಾಯಿ ಕರ್ಮಚಾರಿಗಳು ಬೆಳಗಾವಿ ಪಾಲಿಕೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ರವಿವಾರ ಸಫಾಯಿ ಕರ್ಮಚಾರಿಯಾದ ಜಿತೇಂದ್ರ ಬಾಪು ಡಾವಾಳೆ ಎನ್ನುವವರು ಕರ್ತವ್ಯದಲ್ಲಿ ಇದ್ದಾಗಲೇ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದರು.
ಸಫಾಯಿ ಕರ್ಮಚಾರಿಗಳು ಉಪಯೋಗಿಸುವ ಪಾಲಿಕೆಯ ವಾಹನಗಳು ಚಾಲನೆ ಮಾಡಲು ಯೋಗ್ಯವಿಲ್ಲ. ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮೃತಪಟ್ಟು ಮೂರು ದಿನಗಳ ಕಳೆದರೂ ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಮನೆಗೆ ತೆರಳಿ ವಿಚಾರಿಸಿಲ್ಲ. ಮಹಾನಗರ ಪಾಲಿಕೆ ಸಿಬ್ಬಂದಿ ಸಫಾಯಿ ಕರ್ಮಚಾರಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





