ಕೊರೋನ ಮರೆಯಲ್ಲಿ ಭಾರತದ ಭೂಭಾಗ ಆಕ್ರಮಿಸಲು ಚೀನಾ ಸಂಚು: ಅಮೆರಿಕ ಸಂಸತ್ತು ಆರೋಪ

ವಾಶಿಂಗ್ಟನ್, ಜು. 21: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ಚೀನಾ ನಡೆಸಿರುವ ಆಕ್ರಮಣ ಮತ್ತು ದಕ್ಷಿಣ ಚೀನಾ ಸಮುದ್ರದ ಸುತ್ತಲಿನ ವಿವಾದಾತ್ಮಕ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುವ ಅದರ ವರ್ತನೆಯನ್ನು ಅಮೆರಿಕದ ಸಂಸತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಖಂಡಿಸಿದೆ. ಅದು ಸೋಮವಾರ ಈ ಸಂಬಂಧ ನ್ಯಾಶನಲ್ ಡಿಫೆನ್ಸ್ ಆಥರೈಸೇಶನ್ ಕಾಯಿದೆ (ಎನ್‌ಡಿಎಎ)ಗೆ ತರಲಾದ ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಿದೆ.
ಈ ತಿದ್ದುಪಡಿ ಮಸೂದೆಯನ್ನು ಸಂಸದ ಸ್ಟೀವ್ ಚಾಬೊಟ್ ಮತ್ತು ಭಾರತೀಯ ಅಮೆರಿಕನ್ ಸಂಸದ ಆಮಿ ಬೇರಾ ಮಂಡಿಸಿದರು. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ನಿವಾರಿಸಲು ಭಾರತ ಮತ್ತು ಚೀನಾಗಳು ಶ್ರಮಿಸಬೇಕು ಎಂದು ಮಸೂದೆ ಕರೆ ನೀಡಿದೆ.
ಜಗತ್ತು ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಲು ಶ್ರಮಿಸುತ್ತಿರುವ ಹೊತ್ತಿನಲ್ಲಿ ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಲು ಮುಂದಾಗಿದೆ ಎಂದು ಮಸೂದೆ ಆರೋಪಿಸಿದೆ.
Next Story





