ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದ ರದ್ದುಪಡಿಸಿದ ಬ್ರಿಟನ್
ಲಂಡನ್, ಜು. 21: ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದವನ್ನು ಬ್ರಿಟನ್ ಸೋಮವಾರ ‘’ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಅನಿರ್ದಿಷ್ಟ ಸಮಯದವರೆಗೆ’’ ಅಮಾನತಿನಲ್ಲಿಟ್ಟಿದೆ. ಚೀನಾವು ಹಾಂಕಾಂಗ್ ಮೇಲೆ ಹೊಸದಾಗಿ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ ಬ್ರಿಟನ್ ಈ ಕ್ರಮಕ್ಕೆ ಮುಂದಾಗಿದೆ.
ಈ ವಿಷಯವನ್ನು ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಸಂಸತ್ತಿನಲ್ಲಿ ಘೋಷಿಸಿದರು. ಹಾಂಕಾಂಗ್‌ಗೆ ಮಾರಕ ಆಯುಧಗಳನ್ನು ರಫ್ತು ಮಾಡುವುದರ ಮೇಲೆ ವಿಧಿಸಲಾಗಿರುವ ನಿಷೇಧವನ್ನೂ ಬ್ರಿಟನ್ ವಿಸ್ತರಿಸುವುದು ಎಂದು ಅವರು ಹೇಳಿದರು.
Next Story





