ಶಾಸಕ ನಿರಾಣಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿಜಿಪಿಗೆ ಆರೆಸೆಸ್ಸ್ ಮಾಜಿ ಪ್ರಚಾರಕ ದೂರು

ಮುರುಗೇಶ್ ಆರ್.ನಿರಾಣಿ
ಬೆಂಗಳೂರು, ಜು. 22: ವೈದಿಕ ದೇವ-ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರ ಧಾರ್ಮಿಕ ಶ್ರದ್ಧೆ, ನಂಬಿಕೆ ಹಾಗೂ ಭಾವನೆಗಳಿಗೆ ದಕ್ಕೆ ತಂದ ಬಿಜೆಪಿ ಶಾಸಕ ಮುರುಗೇಶ್ ಆರ್.ನಿರಾಣಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೆಶಕರಿಗೆ, ಸಾಮಾಜಿಕ ಕಾರ್ಯಕರ್ತ ಹಾಗೂ ಆರೆಸ್ಸೆಸ್ ನ ಮಾಜಿ ಪ್ರಚಾರಕ ಎನ್.ಹನುಮೇಗೌಡ ದೂರು ನೀಡಿದ್ದಾರೆ.
ವಿಶ್ವದ ಕೋಟ್ಯಂತರ ಜನರು ಪೂಜಿಸಿ, ಆರಾಧಿಸುವ ಶ್ರೀರಾಮ, ಕೃಷ್ಣ, ಬ್ರಹ್ಮ ಸೇರಿದಂತೆ ವೈದಿಕ ದೇವರುಗಳನ್ನು ಅವಹೇಳನ ಮಾಡಿದ್ದಾರೆ. ಇವರುಗಳ ಜೀವನ ಶೈಲಿ ಮತ್ತು ಆದರ್ಶಗಳು ಸಮಾಜದ ಎಲ್ಲರಿಗೂ ದಾರಿ ದೀಪವಾಗಿವೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ರಾಮನ ಆರಾಧಕರು. ಶಾಸಕರಾಗಿರುವ ನಿರಾಣಿ ಅವರು ದೇವರುಗಳನ್ನು ನಿಂದನೆ ಮಾಡಿರುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಅವರು ವಿರುದ್ಧ ಕ್ರಮ ಜರುಗಿಸಬೇಕು ಎಂದು ಹನುಮೇಗೌಡ ದೂರಿನಲ್ಲಿ ಆಗ್ರಹಿಸಿದ್ದಾರೆ.
Next Story





