ಕಾಸರಗೋಡು: ಇನ್ನೂ ಪತ್ತೆಯಾಗದ ಸಮುದ್ರಕ್ಕೆ ಹಾರಿದ್ದ ಆರೋಪಿ; ಮುಂದುವರಿದ ಶೋಧ

ಕಾಸರಗೋಡು, ಜು.23: ಕಾಸರಗೋಡು ಬಂದರು ಸಮೀಪ ಸಮುದ್ರಕ್ಕೆ ಹಾರಿದ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿ ಮಹೇಶ್ ಗಾಗಿ ಶೋಧ ಮುಂದುವರಿದಿದ್ದು, ಇನ್ನೂ ಪತ್ತೆಯಾಗಿಲ್ಲ.
ಇಂದು ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭಗೊಂಡಿದ್ದು, ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದಾರೆ. ತೀರದಿಂದ ಕಿಲೋ ಮೀಟರ್ ಗಳಷ್ಟು ದೂರದವರೆಗೆ ಶೋಧ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ ಮಾಹಿತಿ ಕಲೆ ಹಾಕಲು ಕಾಸರಗೋಡು ಬಂದರು ಕರೆ ತಂದ ಸಂದರ್ಭದಲ್ಲಿ ಪೊಲೀಸರ ಕಣ್ಣ ಮುಂದೆಯೇ ಕೂಡ್ಲು ಕಾಳ್ಯಾಂಗಾಡ್ ನ ಮಹೇಶ್ ಸಮುದ್ರಕ್ಕೆ ಹಾರಿದ್ದ.
ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಆರೋಪ ಈತನ ಮೇಲಿದೆ. ಮೊಬೈಲನ್ನು ಬಂದರು ಬಳಿಯ ಕಲ್ಲಿನೆಡೆಯಲ್ಲಿ ಬಚ್ಚಿಟ್ಟಿರುವ ಬಗ್ಗೆ ನೀಡಿದ ಮಾಹಿತಿಯಂತೆ ಮೊಬೈಲ್ ನ್ನು ವಶಕ್ಕೆ ತೆಗೆದುಕೊಳ್ಳಲು ಆರೋಪಿಯನ್ನು ಕರೆ ತಂದಿದ್ದಾಗ ಪೊಲೀಸರಿಂದ ತಪ್ಪಿಸಿ ಸಮುದ್ರಕ್ಕೆ ಹಾರಿದ್ದ ಆರೋಪಿ. ಮೊಬೈಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.








