ಬ್ಯಾಂಕ್ ಗೆ ಸಾಲ ಕೇಳಲು ಹೋದ ಚಹಾ ಮಾರಾಟಗಾರನಿಗೆ 50 ಕೋಟಿ ರೂಪಾಯಿಯ ಆಘಾತ!

ಕುರುಕ್ಷೇತ್ರ: ಕೊರೋನ ವೈರಸ್ ಮತ್ತು ಲಾಕ್ ಡೌನ್ ನಿಂದ ಸಮಸ್ಯೆಗೀಡಾಗಿದ್ದ ಕುರುಕ್ಷೇತ್ರದ ಬಡ ಚಹಾ ಮಾರಾಟಗಾರನೊಬ್ಬ ಬ್ಯಾಂಕ್ ಒಂದಕ್ಕೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದೀಗ ಆಘಾತಕ್ಕೊಳಗಾಗಿದ್ದಾನೆ. ಆತನ ಅರ್ಜಿಯನ್ನು ತಿರಸ್ಕರಿಸಿದ್ದ ಬ್ಯಾಂಕ್ ನೀಡಿದ್ದ ಕಾರಣ ಆತನನ್ನು ದಂಗುಬಡಿಸಿದೆ.
ಚಹಾ ಮಾರಾಟಗಾರನಾದ ರಾಜಕುಮಾರ್ ಬ್ಯಾಂಕ್ ಗೆ 50 ಕೋಟಿ ರೂ. ಬಾಕಿಯಿರಿಸಿದ್ದಾನೆಂದು ಬ್ಯಾಂಕ್ ಆತನಿಗೆ ಹೇಳಿದೆ. ಆದರೆ ಆತ ಈ ಹಿಂದೆ ಯಾವುದೇ ಸಾಲವನ್ನೂ ಪಡೆದಿರಲಿಲ್ಲ.
ರಸ್ತೆ ಬದಿ ಟೀ ಮಾರಾಟಗಾರನಾಗಿರುವ ರಾಜಕುಮಾರ್ ಬ್ಯಾಂಕ್ ಗೆ ತೆರಳಿದಾಗ ಆತನ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಲಾಯಿತು. ಎಲ್ಲವನ್ನೂ ನೋಡಿದ ಬ್ಯಾಂಕ್ ಆತ ರೂ 50 ಕೋಟಿ ಸಾಲ ಬಾಕಿಯಿರಿಸಿದ್ದಾನೆ ಎಂದು ಹೇಳಿದೆ. ಈ ಪ್ರಮಾದ ಹೇಗೆ ನಡೆಯಿತೆಂಬ ಕುರಿತು ಸ್ಪಷ್ಟತೆಯಿಲ್ಲ.
Next Story





