ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ

ಶಿವಮೊಗ್ಗ (ಜು.23): ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಐಬಿ ತಂಡ ದಾಳಿ ನಡೆಸಿ ಇಬ್ಬರು ಮಟ್ಕಾ ಜೂಜಾಟ ಆರೋಪಿಗಳನ್ನು ಬಂಧಿಸಿ, ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಜೂ.22 ರಂದು ದಾಳಿ ನಡೆಸಿದ ಡಿಸಿಐಬಿ ಪೊಲೀಸರು, ನಗರದ ಹೊಸಮನೆ ನಿವಾಸಿಗಳಾದ ಹರೀಶ್ (34) ಮತ್ತು ರಮೇಶ್ (40) ಎಂಬವರನ್ನು ಬಂಧಿಸಿ, ಅವರಿಂದ 26,110 ರೂ. ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ತಂಡ, ಜಯನಗರ ಠಾಣಾ ವ್ಯಾಪ್ತಿಯ ಲಕ್ಷ್ಮೀ ಚಿತ್ರಮಂದಿರದ ಬಳಿ ಜೂಜಾಟ ನಡೆಸುತ್ತಿದ್ದ ಹರೀಶ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ 20,570 ರೂ. ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿನೋಬ ನಗರ ಠಾಣಾ ವ್ಯಾಪ್ತಿಯ ವಿನೋಬನಗರದ 60 ಅಡಿ ರಸ್ತೆಯ ಬಳಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ರಮೇಶ್‌ನಿಂದ ರೂ 5,540 ನಗದು ಹಾಗೂ ಓ.ಸಿ ಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story





