ಡಾ.ಯು.ಪಿ.ಉಪಾಧ್ಯಾಯ ನಿಧನಕ್ಕೆ ಶ್ರದ್ಧಾಂಜಲಿ

ಮಂಗಳೂರು, ಜು.23: ಹಿರಿಯ ಭಾಷಾಶಾಸ್ತ್ರಜ್ಞ, ಬಹು ಭಾಷಾ ವಿದ್ವಾಂಸ, ತುಳು ನಿಘಂಟು ಸಂಪಾದಕರಾಗಿ ಶಾಶ್ವತವಾದ ಕೊಡುಗೆ ನೀಡಿದ ಡಾ.ಯು.ಪಿ. ಉಪಾಧ್ಯಾಯರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ದಿ.ಉಪಾಧ್ಯಾಯ ಹಾಗೂ ಅವರ ಪತ್ನಿ ಸುಶೀಲಾ ಉಪಾಧ್ಯಾಯರವರ ಜೀವನ, ಪಾಂಡಿತ್ಯ, ಭಾಷಾ ಸೇವೆಗಳನ್ನು ಸ್ಮರಿಸಿ ಪುಷ್ಪನಮನ ಸಲ್ಲಿಸಿದರು.
ವಿಮರ್ಶಕ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ, ಎಚ್. ಜನಾರ್ದನ ಹಂದೆ, ಪೊಳಲಿ ನಿತ್ಯಾನಂದ ಕಾರಂತ, ಜಾನ್ ಚಂದ್ರನ್ ಉಪಸ್ಥಿತರಿದ್ದರು.
Next Story





