ಬಜ್ಪೆ: ಮಾಸ್ಕ್ ಹಾಕದವರಿಗೆ ದಂಡ
ಬಜ್ಪೆ, ಜು.23: ಕೊರೋನ ನಿಯಂತ್ರಣ ಹಿನ್ನೆಲೆಯಲ್ಲಿ ಬಜ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಜನಜಾಗೃತಿ ಮೂಡಿಸಲಾಗುತ್ತಿದ್ದು, ಆದಾಗ್ಯೂ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಮತ್ತು ವ್ಯವಹರಿಸುತ್ತಿದ್ದವರಿಗೆ ತಲಾ 100 ರೂ. ನಂತೆ ದಂಡ ವಿಧಿಸಿ 1 ಸಾವಿರಕ್ಕೂ ಅಧಿಕ ದಂಡವನ್ನು ವಸೂಲು ಮಾಡಲಾಗಿದೆ.
ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆಪಿಡಿಒ ಸಾಯೀಶ್ ಚೌಟ, ಸಿಬ್ಬಂದಿ ವರ್ಗದ ಬಾಲಕೃಷ್ಣ ಕತ್ತಲ್ಸಾರ್, ಶಿವರಾಮ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹೇಮಂತ್ ಪಾಲ್ಗೊಂಡಿದ್ದರು.
Next Story