ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಗುರುವಾರ 8 ಮಂದಿಗೆ ಕೊರೋನ ಪಾಸಿಟಿವ್
ಉಳ್ಳಾಲ,ಜು.23: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಗುರುವಾರ ಐದು ಮಹಿಳೆಯರ ಸಹಿತ ಒಟ್ಟು ಎಂಟು ಕೊರೋನ ಪಾಸಿಟಿವ್ ಪ್ರಕರಣ ದಾಖಲಾದ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ.
ಉಳ್ಳಾಲದಲ್ಲಿ 30 ವರ್ಷದ ಮಹಿಳೆ, ಪೊಲೀಸ್ ಕ್ವಾರ್ಟರ್ಸ್ ನಲ್ಲಿ 35 ವರ್ಷದ ಮಹಿಳೆ, ಕೋಡಿಯಲ್ಲಿ 20 ವರ್ಷದ ಯುವತಿ, ಕೋಡಿ ತೋಟದಲ್ಲಿ 47 ವರ್ಷದ ಮಹಿಳೆ, ಮಿಲ್ಲತ್ ನಗರದಲ್ಲಿ 24 ವರ್ಷದ ಮಹಿಳೆ, ಆಝಾದ್ ನಗರ ದಲ್ಲಿ 64 ವರ್ಷದ ಪುರುಷ, ಮಾಸ್ತಿಕಟ್ಟೆ ಯಲ್ಲಿ 37 ವರ್ಷದ ಪುರುಷ ,ಅಳೇಕಲದಲ್ಲಿ 79 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.
ಕೋಟೆಕಾರು:ಆರು ಪ್ರಕರಣ
ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷ ದ ಮಗು ಸಹಿತ ಒಟ್ಟು ಆರು ಮಂದಿಗೆ ಕೊರೊನ ಸೋಂಕು ಇರುವುದು ದೃಢಪಟ್ಟಿದೆ ಕೋಟೆಕಾರ್ ನಲ್ಲಿ 31 ವರ್ಷದ ಮಹಿಳೆ, ಖಾಸಗಿ ಆಸ್ಪತ್ರೆಯಲ್ಲಿರುವ 38, 45 ವರ್ಷದ ಇಬ್ಬರು ಮಹಿಳೆಯರು,14 ವರ್ಷದ ಯುವಕ, ಐದು ವರ್ಷ ದ ಬಾಲಕನಿಗೆ ಕೊರೊನ ಸೋಂಕು ದೃಢಪಟ್ಟಿದೆ.
ದೇರಳಕಟ್ಟೆ: 7 ಪ್ರಕರಣ
ಬೆಳ್ಮ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಮತ್ತು ಏಳು ತಿಂಗಳ ಮಗು ಸಹಿತ ಒಟ್ಟು ಏಳು ಮಂದಿಗೆ ಕೊರೊನ ಸೋಂಕು ದೃಢಪಟ್ಟಿದೆ. ಬೆಳ್ಮ ಗ್ರಾಮದ ಕಾನಕರೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ 50 ವರ್ಷದ ಮಹಿಳೆ,19 ವರ್ಷದ ಯುವತಿ,13 ಮತ್ತು 12 ವರ್ಷದ ಇಬ್ಬರು ಬಾಲಕಿಯರು, ದೇರಳಕಟ್ಟೆಯಲ್ಲಿ ಏಳು ತಿಂಗಳ ಮಗು, 31ವರ್ಷದ ಮಹಿಳೆ, 22 ವರ್ಷದ ಯುವಕನಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಮಂಜನಾಡಿ ಗ್ರಾಮದ ಉರುಮಣೆಯಲ್ಲಿ 26 ವರ್ಷದ ಮಹಿಳೆ, ಅಸೈಗೋಳಿಯಲ್ಲಿ 56 ವರ್ಷದ ಪುರುಷ, ತಲಪಾಡಿ ಗ್ರಾಮದ ಕೆಸಿನಗರದಲ್ಲಿ 73 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 436 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.







