ಕೊಣಾಜೆ: ಗುರುವಾರ 9 ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಉಳ್ಳಾಲ,ಜು.23: ಕೊಣಾಜೆ ಗ್ರಾಮದಲ್ಲಿ ಗುರುವಾರ ವಿವಿ ಸಿಬಂದಿಯೊಬ್ಬರ ಕುಟುಂಬ ಸಹಿತ ಒಟ್ಟು ಮೂರು ಕುಟುಂಬಗಳ ಒಂಭತ್ತು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಮಂಗಳೂರು ವಿ.ವಿ.ಕ್ವಾರ್ಟರ್ಸ್ ನಲ್ಲಿರುವ 33 ವರ್ಷದ ವಿ.ವಿ. ಸಿಬ್ಬಂದಿ, 30 ವರ್ಷದ ಮಹಿಳೆ ಮತ್ತು 2 ವರ್ಷದ ಮಗುವಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊಣಾಜೆ ಪದವಿನಲ್ಲಿ ಒಂದೇ ಕುಟುಂಬದ 40, 65, 45 ವರ್ಷದ ಮೂವರು ಮಹಿಳೆಯರು, ಕೋಡಿಜಾಲ್ ನಲ್ಲಿ ಒಂದೇ ಕುಟುಂಬದ 48, 26 ವರ್ಷದ ಇಬ್ಬರು ಮಹಿಳೆಯರು ಹಾಗೂ 50 ವರ್ಷದ ಪುರುಷನಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Next Story





