ರಾಷ್ಟ್ರಪತಿ ಪುರಸ್ಕಾರ ಆಯ್ಕೆ ಸಮಿತಿಗೆ ಸಂಸ್ಕೃತ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ನೇಮಕ

ಬೆಂಗಳೂರು, ಜು.23: ಭಾರತ ಸರಕಾರದ ರಾಷ್ಟ್ರಪತಿ ಪುರಸ್ಕಾರ ಆಯ್ಕೆ ಸಮಿತಿಗೆ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ನೇಮಕ ಆಗಿದ್ದಾರೆ.
ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು, ಶಾಸ್ತ್ರೀಯ ಭಾಷೆಗಳ ಹಿರಿಯ ವಿದ್ವಾಂಸರಿಗೆ ನೀಡುವ ರಾಷ್ಟ್ರಪತಿ ಪುರಸ್ಕಾರ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಸದಸ್ಯರಾಗಿ ಸಂಸ್ಕೃತ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ನೇಮಕ ಆಗಿರುವುದಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರಕಟನೆಯ ಮೂಲಕ ಹರ್ಷ ವ್ಯಕ್ತಪಡಿಸಿದೆ.
Next Story





