ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 83 ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಕಾರವಾರ,ಜು.23: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 83 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಹಳಿಯಾಳದಲ್ಲಿ 50 ಪ್ರಕರಣ ದಾಖಲಾಗುವ ಮೂಲಕ ಜನರಲ್ಲಿ ಆತಂಕ ಮೂಡಿದೆ. ಅಂಕೋಲಾದಲ್ಲಿ 3, ಭಟ್ಕಳ 8, ಕಾರವಾರ 5, ಕುಮಟಾ 1, ಮುಂಡಗೋಡ 2, ಸಿದ್ದಾಪುರ 2, ಶಿರಸಿ 6, ಯಲ್ಲಾಪುರಲ್ಲಿ 6 ಪ್ರಕರಣಗಳು ದೃಢಪಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟೂ 1418 ಪ್ರಕರಣಗಳು ದಾಖಲಾಗಿದೆ.
89 ಮಂದಿ ಗುಣಮುಖ: ದೃಢಪಟ್ಟ ಕೊರೋನ ಸೋಂಕಿತರಿಗಿಂತ ಗುಣಮುಖರಾಗಿ ಬಿಡುಗಡೆಯಾಗಿರುವವರೇ ಹೆಚ್ಚಿರುವುದು ಜನರಲ್ಲಿ ಸಮಾಧಾನ ತಂದಿದೆ. ಗುರುವಾರ 83 ಕೊರೋನ ಸೋಂಕು ದೃಢಪಟ್ಟಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟೂ 89 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ಭಟ್ಕಳ 2, ಹಳಿಯಾಳ 9, ಹೊನ್ನಾವರ 16, ಕಾರವಾರ 6, ಕುಮಟಾ, ಮುಂಡಗೋಡ ತಲಾ 14, ಸಿದ್ದಾಪುರ 4, ಶಿರಸಿ 23, ಯಲ್ಲಾಪುರ ಒಬ್ಬರು ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 705 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು 700 ಸಕ್ರಿಯ ಪ್ರಕರಣಗಳಿದ್ದು ಆಯಾ ತಾಲೂಕಿನ ಕೊವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.