ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ಜು.29ರಂದು ಮಂಡ್ಯ ಬಂದ್‍ಗೆ ಕರೆ
ಮಂಡ್ಯ, ಜು.23: ದಕ್ಷಿಣ ಕರ್ನಾಟಕದ ಜೀವನಾಡಿ ಕೃಷ್ಣರಾಜಸಾಗರದ ಅಣೆಕಟ್ಟೆಯ(ಕೆಆರ್‍ಎಸ್) ಭದ್ರತೆಗೆ ಧಕ್ಕೆ ತರುತ್ತಿರುವ ಅಣೆಕಟ್ಟೆ ವ್ಯಾಪ್ತಿಯಲ್ಲಿನ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಆಗ್ರಹಿಸಿ ಜು.29 ರಂದು ಮಂಡ್ಯ ಬಂದ್ ನಡೆಸಲು ವಿವಿಧ ಸಂಘಟನೆಗಳ ಸಮಾನ ಮನಸ್ಕರ ಸಭೆ ತೀರ್ಮಾನಿಸಿದೆ.
ನಗರದ ಹಿಂದಿ ಭವನದಲ್ಲಿ ಗುರುವಾರ ನಡೆದ ರೈತಸಂಘ, ಕರುನಾಡ ಸೇವಕರು, ಆಟೋ ಚಾಲಕರ ಸಂಘ, ಜಯಕರ್ನಾಟಕ, ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ, ಕಬ್ಬು ಬೆಳೆಗಾರರ ಸಂಘ, ಒಕ್ಕಲಿಗರ ಸೇವಾ ಟ್ರಸ್ಟ್, ದಸಂಸ (ಕೃಷ್ಣಪ್ಪ ಬಣ) ಹಾಗೂ ವಿವಿಧ ಸಮಾನಮನಸ್ಕರ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಹೋರಾಟವನ್ನು ಬೆಂಗಳೂರಿನವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಜಿಪಂ ಮಾಜಿ ಸದಸ್ಯ ಕೆಂಪೂಗೌಡ, ಶಂಭೂನಹಳ್ಳಿ ಸುರೇಶ್, ಕಲ್ಲಹಳ್ಳಿ ರವೀಂದ್ರ, ಕೃಷ್ಣ, ಎಂ.ಬಿ.ನಾಗಣ್ಣಗೌಡ, ಪ್ರೊ.ಹುಲ್ಕೆರೆ ಮಹದೇವ, ನಾಗಣ್ಣ ಬಾಣಸವಾಡಿ, ಲತಾ ಶಂಕರ್, ಇತರರು ಉಪಸ್ಥಿತರಿದ್ದರು.
Next Story





