ಪುತ್ತೂರು: ನಾಲ್ವರು ಪೊಲೀಸ್ ಸಿಬ್ಬಂದಿ ಸಹಿತ 13 ಮಂದಿಗೆ ಕೊರೋನ ಪಾಸಿಟಿವ್
ಸಾಂದರ್ಭಿಕ ಚಿತ್ರ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಶುಕ್ರವಾರ ಒಟ್ಟು 13 ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ 44 ವರ್ಷ ಪ್ರಾಯದ, 28 ವರ್ಷ ಪ್ರಾಯದ, 38 ವರ್ಷ ಪ್ರಾಯದ, 58 ವರ್ಷ ಪ್ರಾಯದ ನಾಲ್ವರು ಪುರುಷ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.
ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ನಿವಾಸಿ 60 ವರ್ಷ ಪ್ರಾಯದ ಪುರುಷ, ಒಳಮೊಗ್ರು ಗ್ರಾಮದ 56 ವರ್ಷ ಪ್ರಾಯದ ಪುರುಷ, 34ನೇ ನೆಕ್ಕಿಲಾಡಿ ಗ್ರಾಮದ 23 ವಯಸ್ಸಿನ ಮಹಿಳೆ, ಕೊಡಿಪ್ಪಾಡಿ ಗ್ರಾಮದ 67 ವರ್ಷ ಪ್ರಾಯದ ಮಹಿಳೆ, ಪುತ್ತೂರು ನಗರದ ಬಪ್ಪಳಿಗೆ ನಿವಾಸಿ 33 ವರ್ಷ ಪ್ರಾಯದ ಯುವಕ, ಚಿಕ್ಕಮುಡ್ನೂರು ಗ್ರಾಮದ 52 ವರ್ಷ ಪ್ರಾಯದ ಪುರುಷ, ಪಡ್ನೂರು ನಿವಾಸಿ 55 ವರ್ಷ ಪ್ರಾಯದ ಪುರುಷರಲ್ಲಿ ಕೊರೋನಾ ದೃಢಪಟ್ಟಿದೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ 58 ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ ಗ್ರಾಮದ 65 ವರ್ಷ ಪ್ರಾಯದ ಪುರುಷರಲ್ಲಿ ಶುಕ್ರವಾರ ಕೊರೋನ ದೃಢಪಟ್ಟಿದೆ.
ಈ ತನಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 143 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.