ಉಡುಪಿಯಲ್ಲಿ ಮತ್ತೊಂದು ಹೊಟೇಲ್ ಸೀಲ್ಡೌನ್
ಉಡುಪಿ, ಜು.24: ನೌಕರರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವು ದರಿಂದ ಉಡುಪಿ ಹಳೆ ತಾಲೂಕು ಕಚೇರಿ ಸಮೀಪದ ಹೊಟೇಲು ಸೇರಿದಂತೆ ಸುತ್ತಮುತ್ತಲಿನ ನಾಲ್ಕು ಅಂಗಡಿಗಳನ್ನು ಸೀಲ್ಡೌನ್ ಮಾಡಲಾಗಿದೆ.
ಹೊಟೇಲಿನ ಕಟ್ಟಡದಲ್ಲಿರುವ ವೈನ್ಶಾಪ್, ಟೈಲರ್, ವಕೀಲರ ಕಚೇರಿ ಸೇರಿದಂತೆ ನಾಲ್ಕು ಅಂಗಡಿಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಅವರೆಲ್ಲರನ್ನು ಕ್ವಾರಂಟೇನ್ಗೆ ಒಳಪಡಿಸಲಾಗಿದೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಒಟ್ಟು 18 ಕಡೆ ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದೆ. ಇವುಗಳಲ್ಲಿ ತೆಂಕನಿಡಿಯೂರು, ಮೂಡನಿಡಂಬೂರು ತಲಾ ಮೂರು, ಶಿವಳ್ಳಿ 7, ಅಲೆವೂರು-2, ಕೊರಂಗ್ರಪಾಡಿ, ಬಡಾನಿಡಿಯೂರು ಹಾಗೂ ಉದ್ಯಾವರ ತಲಾ ಒಂದು ಸೇರಿವೆ ಎಂದು ತಿಳಿದು ಬಂದಿದೆ.
Next Story