ಕಾಪು ತಾಲೂಕಿನಲ್ಲಿ 12 ಮಂದಿಗೆ ಕೊರೋನ ಸೋಂಕು
ಕಾಪು, ಜು.24: ಕಾಪು ತಾಲೂಕು ವ್ಯಾಪ್ತಿಯಲ್ಲಿ 12 ಮಂದಿಗೆ ಶುಕ್ರವಾರ ಕೊರೋನ ಸೋಂಕು ದೃಢವಾಗಿದೆ. ಇದರಲ್ಲಿ ಮೆಸ್ಕಾಂ ಹಾಗೂ ಗೃಹರಕ್ಷಕದಳ ಸಿಬ್ಬಂದಿ ಸೇರಿದ್ದಾರೆ. ಬಡಾ ಗ್ರಾಮದ 60 ವರ್ಷದ ಪುರುಷ, ಉಚ್ಚಿಲದ 63 ವರ್ಷದ ಮಹಿಳೆ ಮತ್ತು 37 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಅವರನ್ನು ಬ್ರಹ್ಮಾವರ ಮತ್ತು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡ್ಸಾಲಿನ 33 ವರ್ಷದ ಪುರುಷ, ಪಡುಬಿದ್ರಿ-ಕೆಳಗಿನಪೇಟೆಯ 36 ವರ್ಷದ ಪುರುಷ, ಉಚ್ಚಿಲದ 29 ವರ್ಷದ ಪುರುಷ, ಪಾದೆಬೆಟ್ಟುವಿನ57 ವರ್ಷದ ಪುರುಷ, ಮಜೂರು ಗ್ರಾಮದವಳದೂರು ನಿವಾಸಿ 42 ವರ್ಷದ ಮೆಸ್ಕಾಂ ಸಿಬಂದಿ, ಮಲ್ಲಾರು ಗ್ರಾಮದ 38 ವರ್ಷದ ಹೋಂಗಾರ್ಡ್, ಉಳಿಯಾರಗೋಳಿಯ28 ವರ್ಷದ ಹೋಂಗಾರ್ಡ್, ಬೆಳಪು ಜವನರಕಟ್ಟೆಯ 29 ವರ್ಷದ ಪುರುಷ, ಕಟಪಾಡಿ ಮಟ್ಟುವಿನ 36 ವರ್ಷದ ಪುರುಷನಲ್ಲಿ ಸೋಂಕು ಧೃಡಪಟ್ಟಿದ್ದು, ಇವರೆಲ್ಲರ ಮನೆ ಪರಿಸರವನ್ನು ಸೀಲ್ಡೌನ್ ಮಾಡಲಾಗಿದೆ.
Next Story