ಕಾಪು: ನಮ್ಮೂರ ಗೆಳೆಯರ ಬಳಗದಿಂದ ಪಿಪಿಇ ಕಿಟ್ ವಿತರಣೆ
ಕಾಪು, ಜು.25: ಉಚ್ಚಿಲದ ನಮ್ಮೂರ ಗೆಳೆಯರ ಬಳಗ ಎಂಬ ವಾಟ್ಸಾಪ್ ಗ್ರೂಪ್ ಸದಸ್ಯರು ಕೋವಿಡ್-19 ಅಂತ್ಯಕ್ರಿಯೆ ನಡೆಸಲು ಅನುಕೂಲವಾಗಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಉಚ್ಚಿಲ ಡಿವಿಶನ್ಗೆ ಪಿಪಿಇ ಕಿಟ್ಗಳನ್ನು ಹಸ್ತಾಂತರಿಸಿದರು.
ಕುವೈತ್ನಲ್ಲಿ ಉದ್ಯೋಗದಲ್ಲಿರುವ ಉಚ್ಚಿಲ ಅಸುಪಾಸಿನ ಗೆಳೆಯರನ್ನೊಳ ಗೊಂಡ ಕರೀಂ ಹಸನ್ ಬಿರಾಲಿ ಮತ್ತು ಹಂಝು ಮಹಮ್ಮದ್ ನೇತೃತ್ವದ ಈ ಗ್ರೂಪ್ ವತಿಯಿಂದ ನೆರವು ನೀಡಲಾಗಿದೆ.
ನಮ್ಮೂರ ಗೆಳೆಯರ ಬಳಗದ ಸದಸ್ಯರಾದ ಅಲ್ತಾಫ್ ಎರ್ಮಾಳು, ಹನೀಫ್ ಮೋನಬ್ಬ, ಅಬ್ದುಲ್ ರಝಾಕ್ ಮೋನಬ್ಬ, ಪಿಎಫ್ಐ ಮುಖಂಡರಾದ ಸಿದ್ದೀಕ್ ಕನ್ನಂಗಾರ್, ಇಬ್ರಾಹಿಂ ಅರ್ಶ್ ಉಚ್ಚಿಲ, ಶರೀಫ್ ಕರೀಂ, ಕಲೀಲ್ ಉಮರ್, ಆಶಿಕ್ ಮೂಳೂರು ಉಪಸ್ಥಿತರಿದ್ದರು.
Next Story