ಬೆಂಗಳೂರು: 105 ವರ್ಷದ ವೃದ್ಧ ಕೊರೋನ ಸೋಂಕಿಗೆ ಬಲಿ
![ಬೆಂಗಳೂರು: 105 ವರ್ಷದ ವೃದ್ಧ ಕೊರೋನ ಸೋಂಕಿಗೆ ಬಲಿ ಬೆಂಗಳೂರು: 105 ವರ್ಷದ ವೃದ್ಧ ಕೊರೋನ ಸೋಂಕಿಗೆ ಬಲಿ](https://www.varthabharati.in/sites/default/files/images/articles/2020/07/25/252473-1595688433.jpg)
ಬೆಂಗಳೂರು, ಜು.25: ಕೊರೋನ ಮಹಾಮಾರಿಗೆ ನಗರದ 105 ವರ್ಷದ ವೃದ್ಧರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಬಸವೇಶ್ವರ ನಗರದ ಅತ್ಯಂತ ಹಿರಿಯ ವ್ಯಕ್ತಿಗೆ ಇತ್ತೀಚೆಗೆ ಕೊರೋನ ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಬಸವೇಶ್ವರ ನಗರದ ಪ್ರಿಸ್ಟಿನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ 105 ವರ್ಷದ ವ್ಯಕ್ತಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ನಂತರ ಆತನಿಂದ ಇವರಿಗೂ ಕೊರೋನ ಸೋಂಕು ತಗಲಿತ್ತು.
ಈ ಶತಾಯುಷಿಗೆ ಜ್ವರ ಮಾತ್ರ ಬಂದಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮಂಗಳವಾರ ಪಾಸಿಟಿವ್ ಬಂದಿತ್ತು. ಆಕ್ಸಿಜನ್ ಲೆವೆಲ್ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Next Story