ಕೋವಿಡ್ ಸೋಂಕಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೃತ್ಯು

ಕಲಬುರಗಿ, ಜು.25: ಕೋವಿಡ್-19 ಸೋಂಕಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಇಲ್ಲಿನ ಶಹಾಬಾದ್ ತಾಲೂಕಿನ ಮರತೂರು ಪಂಚಾಯತ್‍ನ 58 ವರ್ಷದ ಅಭಿವೃದ್ಧಿ ಅಧಿಕಾರಿ ಸೋಂಕಿನಿಂದ ಶನಿವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಜು.17ರಂದು ಅವರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಮ್ಸ್ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಹೃದ್ರೋಗ ಚಿಕಿತ್ಸೆಗೂ ಒಳಗಾಗಿದ್ದರು ಎನ್ನಲಾಗಿದೆ.
Next Story





