ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು
ಕುಂದಾಪುರ, ಜು.25: ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿರುವ ಬಗ್ಗೆ ಕುಂದಾಪುರ ಮತ್ತು ಬೈಂದೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ.
ಜು.14ರಂದು ಮುಂಬೈಯಿಂದ ಬಂದ ತಲ್ಲೂರು ಗ್ರಾಮದ ಐವನ್ ಮೈಕಲ್ ಪಿಂಟೋ ಎಂಬವರ ಮಗಳು ವೆನಿಶಾ ಕ್ಯಾಥರೀನ್ ಪಿಕಾರ್ಡೋ (25) ಎಂಬಾಕೆಗೆ 14 ದಿನಗಳ ಹೋಮ್ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ ಆಕೆ ಜು.22ರಂದು ಹೋಮ್ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ಕುಂದಾಪುರ ಬ್ಯಾಂಕ್ಗೆ ಹೋಗಿ ಬಂದಿರುವುದಾಗಿ ತಲ್ಲೂರು ಗ್ರಾಪಂ ಪಿಡಿಓ ಹಾಗೂ ಗ್ರಾಮಕರಣಿಕರು ವರದಿ ನೀಡಿದ್ದಾರೆ. ಅದರಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಹೊರರಾಜ್ಯದಿಂದ ಬಂದು 14 ದಿನಗಳ ಕಾಲ ಹೋಮ್ ಕ್ವಾರಂಟೇನ್ಗೆ ಒಳಗಾಗಿದ್ದ ಉಪ್ಪುಂದ ಗ್ರಾಮದ ಗಿರೀಶ್ ಹಾಗೂ ಸೀತಾ ರಾಮ ಎಂಬವರು ಜು.24ರಂದು ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗಡೆ ಹೋಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story