ಕೊರೋನ ಸಾಮಾನ್ಯ ಶೀತಜ್ವರ, ಭಯ ಬೇಡ: ಸೋಂಕಿನಿಂದ ಚೇತರಿಸಿದ 100 ರ ವೃದ್ಧೆ

ಬಳ್ಳಾರಿ, ಜು.25: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಗ್ರಾಮದ 100 ವರ್ಷದ ವೃದ್ಧೆಯೊಬ್ಬರು ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕೊರೋನ ಸೋಂಕು ದೃಢಪಟ್ಟಿದ್ದ ಹಾಲಮ್ಮ ಎಂಬ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಚೇತರಿಸಿಕೊಂಡಿದ್ದಾರೆ.
ವೈದ್ಯರು ಉತ್ತಮ ಚಿಕಿತ್ಸೆ ನೀಡಿದರು. ದೈನಂದಿನ ಆಹಾರದ ಜೊತೆಗೆ, ದಿನಾ ಒಂದು ಸೇಬು ತಿನ್ನುತ್ತಿದ್ದೆ. ವೈದ್ಯರು ಮಾತ್ರೆ ಮತ್ತು ಇಂಜೆಕ್ಷನ್ ನೀಡುತ್ತಿದ್ದರು. ಈಗ ನಾನು ಆರೋಗ್ಯವಾಗಿದ್ದೇನೆ. ಕೊರೋನ ಒಂದು ಸಾಮಾನ್ಯ ಶೀತಜ್ವರ ಎಂದು ಹಾಲಮ್ಮ ಹೇಳಿದ್ದಾರೆ.
ಇವರ ಮಗ, ಸೊಸೆ ಹಾಗೂ ಮೊಮ್ಮಗನಿಗೂ ಸೋಂಕು ದೃಢಪಟ್ಟಿದ್ದು ಕುಟುಂಬಕ್ಕೆ ಮನೆಯಲ್ಲೇ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story





